ಮಡಿಕೇರಿ NEWS DESK ಸೆ.22 : ಐತಿಹಾಸಿಕ ಮಡಿಕೇರಿ ದಸರಾವನ್ನು ಈ ಬಾರಿ ವಿಜ್ರಂಭಣೆಯಿAದ ಆಚರಿಸಲಾಗುವುದು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಾನ ಆದ್ಯತೆ ನೀಡಲಾಗುವುದು ಎಂದು ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ. ನಾಡಹಬ್ಬ ಮಡಿಕೇರಿ ದಸರಾ ಕಚೇರಿಯನ್ನು ಉದ್ಘಾಟಿಸಿ ಮತ್ತು ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು ಅದ್ದೂರಿ ದಸರಾ ಆಚರಣೆಗೆ ಸರ್ಕಾರದಿಂದ ಅಗತ್ಯ ಅನುದಾನದ ನೆರವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿ ಮಡಿಕೇರಿ ದಸರಾ ಹಬ್ಬವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಮಕ್ಕಳ ದಸರಾ, ಮಹಿಳಾ ದಸರಾ, ಜಾನಪದ ಮತ್ತು ಯುವ ದಸರಾದೊಂದಿಗೆ ಕಾಫಿ ದಸರಾವನ್ನೂ ಕೂಡ ಆಯೋಜಿಸಲಾಗಿದೆ. ಕಾಫಿ ಬೆಳೆಗಾರರಿಂದ ಇದಕ್ಕೆ ಉತ್ತಮ ಸ್ಪಂದನ ಕೂಡ ದೊರಕಿದೆ ಎಂದರು. ದಶಮಂಟಪಗಳ ಶೋಭಾಯಾತ್ರೆಯೊಂದಿಗೆ 9 ದಿನಗಳ ಕಾಲ ನಗರದಲ್ಲಿ ನಡೆಯುವ ಅರ್ಥಪೂರ್ಣ ದಸರಾ ಉತ್ಸವ ಆಯೋಜನೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಡಾ.ಮಂತರ್ ಗೌಡ ಹೇಳಿದರು. ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್, ಖಜಾಂಚಿ ಅರುಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಅನಿಲ್ ಎಚ್.ಟಿ, ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ನಗರಸಭೆಯ ಪೌರಾಯುಕ್ತ ಹೆಚ್.ಆರ್.ರಮೇಶ್, ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ ರಾಕೇಶ್, ಮಹೇಶ್ ಜೈನಿ, ಶ್ವೇತಾ ಪ್ರಶಾಂತ್, ಸಬಿತಾ, ಅಮೀನ್ ಮೊಯಿಸಿನ್, ಶ್ವೇತಾ, ಮನ್ಸೂರ್, ದಸರಾ ಸಮಿತಿ ಪ್ರಮುಖರಾದ ಬಿ.ಎಂ.ರಾಜೇಶ್, ಎ.ಸಿ.ದೇವಯ್ಯ, ಪಿ.ಡಿ.ಪೊನ್ನಪ್ಪ, ವೀಣಾಕ್ಷಿ, ಮೀನಾಜ್ ಪ್ರವೀಣ್, ತೆನ್ನಿರ ಮೈನಾ, ಆರ್.ಪಿ.ಚಂದ್ರಶೇಖರ್, ವಿವಿಧ ಸಮಿತಿಗಳ ಸದಸ್ಯರು, ನಗರಸಭೆಯ ಅಧಿಕಾರಿಗಳು ಸೇರಿದಂತೆ ಮಂಟಪ ಸಮಿತಿಗಳ ಪ್ರಮುಖರು ಹಾಜರಿದ್ದರು. ದಸರಾ ನೂತನ ಕಚೇರಿಯಲ್ಲಿ ಶ್ರೀಕೃಷ್ಣ ಉಪಾಧ್ಯಾಯ ಅವರು ಗಣಪತಿ ಹೋಮ ಹಾಗೂ ದುರ್ಗಾಪೂಜೆಯನ್ನು ನೆರವೇರಿಸಿದರು.