ಮಡಿಕೇರಿ NEWS DESK ಸೆ.23 : ವಿರಾಜಪೇಟೆ ತಾಲ್ಲೂಕಿನ ಬೆಳ್ಳರಿಮಾಡು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ತೋಟಗಳಿಗೆ ನುಗ್ಗಿ ಬೆಳೆ ನಷ್ಟ ಮಾಡುತ್ತಿರುವ ಗಜಪಡೆ ಮನೆಯಂಗಳಕ್ಕೂ ಬಂದು ಆತಂಕ ಮೂಡಿಸುತ್ತಿವೆ.
ಗ್ರಾಮದ ಪುಟ್ಟಿಚಂಡ ಪದ್ಮಿನಿ ಮುದ್ದಪ್ಪ ಅವರ ಕಾಫಿ ತೋಟಕ್ಕೆ ತಡರಾತ್ರಿ ನಾಲ್ಕು ಕಾಡಾನೆಗಳು ದಾಳಿ ಮಾಡಿವೆ. ಬೆಳೆ ಹಾನಿ ಮಾಡಿದ್ದು, ಕಾಡನೆಗಳ ಸಂಚಾರದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಅನೇಕ ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಿಂಡು ಉಪಟಳ ನೀಡುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಪಾರ ಬೆಳೆ ನಷ್ಟವಾಗುತ್ತಿರುವುದಲ್ಲದೆ, ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.