ಮಡಿಕೇರಿ ಸೆ.25 NEWS DESK : ಸೇವಾ ಭಾರತಿ ಕೊಡಗು, ವೈದ್ಯಕೀಯ ವಿಜ್ಞಾನ ಸಂಸ್ಥೆ ಕೊಡಗು ಮತ್ತು ಎನ್.ಎಂ.ಓ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಆಶ್ರಯದಲ್ಲಿ ಕಾನ್ ಬೈಲ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಔಷಧಿ ವಿತರಣಾ ಕಾರ್ಯಕ್ರಮ ನಡೆಯಿತು. ಶಿಬಿರದಲ್ಲಿ ಕಾನ್ ಬೈಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 126 ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಿಬಿರದಲ್ಲಿ ಅವಶ್ಯಕತೆ ಇದ್ದವರಿಗೆ ಉಚಿತ ಔಷಧಿಯನ್ನೂ ವಿತರಿಸಲಾಯಿತು. ಸೇವಾ ಭಾರತಿ ಕೊಡಗು ಅಧ್ಯಕ್ಷ ಟಿ.ಸಿ.ಚಂದ್ರನ್, ಕಾರ್ಯದರ್ಶಿ ಡಿ.ಎಚ್.ತಮ್ಮಪ್ಪ ನೇತೃತ್ವದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಶಶಾಂಕ ಎಂ.ಜೆ, ಡಾ.ಚಿತ್ರಾ, ಡಾ. ಗಗನ ವಿ, ಡಾ. ಸುಷ್ಮಿತಾ, ಡಾ. ಹೆಚ್ ಹರಿ ನಾರಾಯಣ, ಡಾ. ಪವನ್ ಪವಾರ್, ಡಾ. ಪ್ರಫುಲ್ ಎಸ್.ವಿ, ಡಾ. ಜ್ಯೋತಿ ಪಿ.ವಿ, ಡಾ. ಮನೀಷಾ ದೇವಿ, ಡಾ. ದಿಶಾ ರಘುನಾಥ್, ಡಾ. ಹರ್ಷ, ಡಾ. ಲೋಹಿತ್ ಎಂ.ಎಸ್, ಫಾರ್ಮಾಶಿಸ್ಟ್ ಆಶೀಕ್ ಅಯ್ಯಪ್ಪ ಅವರ ಮಾರ್ಗದರ್ಶನದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಿಬ್ಬಂದಿಗಳು ಶಿಬಿರವನ್ನು ನಡೆಸಿಕೊಟ್ಟರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶೋಧ ಮತ್ತು ಇತರರು ಸಹಕಾರ ನೀಡಿದರು.