ಸುಂಟಿಕೊಪ್ಪ ಸೆ.25 NEWS DESK : ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 40,55,195 ರೂಗಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಿದರು. ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಸಾಧಿಸುತ್ತಾ ಬರುತ್ತಿದೆ ಎಂದು ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಹೇಳಿದರು. ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 93ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸದಸ್ಯರುಗಳಿಗೆ ಭೂ ದಾಖಲಾತಿ ಆಧಾರದ ಮೇಲೆ ಕೆಪಿಸಿ ಫಸಲು ಸಾಲ ಕೃಷಿಯೇತರ ಸಾಲ, ಮಧ್ಯಮಾವದಿ ಕೃಷಿ ಸಾಲ, ವಾಹನ ಸಾಲ, ವೇತನ ಆಧಾರಿತ ಸಾಲ, ಆಭರಣ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಪಿಗ್ಮಿಠೇವಣಿ ಜವರ್ ಡ್ರಾಪ್ಟ್ ಸಾಲ, ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗುತ್ತಿದೆ ಎಂದರು. ಸಂಘದಲ್ಲಿ 1576 ಮಂದಿ ಸದಸ್ಯರುಗಳಿದ್ದು, ಪಾಲು ಬಂಡವಾಳ ರೂ.1,14,80,35 ಇರುತ್ತದೆ. ಸಂಘದಲ್ಲಿ 9 ಕೋಟಿ 52 ಲಕ್ಷ 32328 ಠೇವಣಿ ಸಂಗ್ರಹಿಸಲಾಗಿದೆ. ಕೆಸಿಸಿ ಸಾಲದ 350 ಸದಸ್ಯರಿಗೆ 8,53,53,000 ರೂಗಳನ್ನು ನೀಡಲಾಗಿದೆ. ಜಮೀನು ಸಾಲ 69,51,000 ರೂ ವಿತರಿಸಿದ್ದು, ಈ ಪೈಕಿ ರೂ 2,67,198 ಹಳೆ ಬಾಕಿ ಸೇರಿದ ವಾಯಿದೆ ಮೀರಿದ ಸಾಲ ಇರುತ್ತದೆ ಎಂದು ಉತ್ತಪ್ಪ ಹೇಳಿದರು. ಸೋಮವಾರಪೇಟೆ ತಾಲೂಕಿನಲ್ಲಿ ಉತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಗೆ ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘ ಆಯ್ಕೆಗೊಂಡಿದ್ದು, 25000 ರೂ ನಗದು ಪ್ರಾಪ್ತಿಯಾಗಿದ್ದನ್ನು ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರಿಗೆ ಸನ್ಮಾನಿಸಿದರು. ಅಲ್ಲದೆ ಕೇಂದ್ರ ಸಹಕಾರ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾದ ಈ ಸಂಘದ ಅಧ್ಯಕ್ಷ ನಾಪಂಡ ಉತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸದಸ್ಯರಾಗಿದ್ದಾಗ ಸಂಘದ ಅಧ್ಯಕ್ಷನಾಗಿ 1990 ರಲ್ಲಿ ಈ ಸಂಘವನ್ನು ಲಾಭದತ್ತ ತರಲು ಶ್ರಮಿಸಿದ್ದೇನೆ. ಇಂದು ಸಂಘದ ಆಡಳಿತ ಮಂಡಳಿ ಸದಸ್ಯರುಗಳ ಶ್ರಮದಿಂದ ಸಂಘ ಬೆಳೆಯುತ್ತಿದೆ. ಮುಂದೆ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಹೇಳಿದರು. ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರುಗಳ ಮಕ್ಕಳು ಎಸ್‍ಎಸ್‍ಎಲ್‍ಸಿ, ಪಿಯುಸಿ ಕಲೆ ವಾಣಿಜ್ಯವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಸದಸ್ಯರುಗಳ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದವರಿಗೆ ಧನಸಹಾಯ ವಿತರಿಸಲಾಯಿತು. ಸದಸ್ಯರಾದ ಮಂದೆಯಂಡ ಗಣೇಶ್, ಪಿ.ಎಸ್.ರಮೇಶ, ಮೋಹನ್ ಕುಮಾರ್, ಕೊಪ್ಪತ್ತಂಡ ಗಣೇಶ, ಎಂ.ಪಿ.ಮನುಮುದ್ದಪ್ಪ, ಬಿದ್ದಪ್ಪ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕಾವೇರಪ್ಪ, ಉಪಾಧ್ಯಕ್ಷೆ ಸಿ.ಎಸ್.ಪವಿತ್ರ, ನಿರ್ದೇಶಕರುಗಳಾದ ಬಿ.ಎ.ಮೊಣ್ಣಪ್ಪ, ಸಿ.ಪಿ.ತಮ್ಮಯ್ಯ, ಪಿ.ಪಿ.ತಿಲಕ್‍ಕುಮಾರ, ಕೆ.ಕೆ.ಕುಟ್ಟಪ್ಪ, ಎಂ.ಬಿ.ತಮ್ಮಯ್ಯ, ಎಂ.ಕೆ.ದೇಚಮ್ಮ, ಕೆ.ಎ.ಲತೀಫ್, ಎನ್.ಕೆ.ಭವಿನ್, ಎಂ.ಆರ್.ಗಿರೀಶ್ ಕುಮಾರ್, ಹೆಚ್.ಈ.ಭೀಮಯ್ಯ, ಎಂ.ವೈ.ಕೇಶವ ಕೆಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರಾದ ಟಿ.ಆರ್.ಪವನ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.