ಚೆಟ್ಟಳ್ಳಿ ಸೆ.25 NEWS DESK : ಮಂಗಳೂರಿನಲ್ಲಿ ನಡೆದ ಸೀಜನ್-4 ಕುಡ್ಲ ಚಾಲೆಂಜ್ 2024 ಆಫ್ ರೋಡ್ ರ್ಯಾಲಿ ಆಯೋಜಿಸಿರುವ ಕೆ ಎ 19 -20 ಯುನೈಟೆಡ್ ಹಾಫ್ ರೋಡ್ ಚಾಲೆಂಜ್ ನಲ್ಲಿ ಕೊಡಗಿನ ಅಮ್ಮತ್ತಿ ಕಾವಾಡಿಯ ಮಂಡೆಪಂಡ ಮಿಥುನ್ ಕಾರ್ಯಪ್ಪ, ಎಡೂರಿನ ಬೊಪ್ಪಂಡ ಸೋನು ಪೊನ್ನಪ್ಪ, ಮೂರ್ನಾಡಿನ ಕಂಬೀರಂಡ ದಿವ್ಯ ಮುತ್ತಪ್ಪ ಹಾಗೂ ಅಮ್ಮ ತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಉತ್ತಮ ಸಾಧನೆ ಮಾಡಿದ್ದಾರೆ. ಲೇಡಿಸ್ ಕ್ಲಾಸ್ ನಲ್ಲಿ ಕಂಬೀರಂಡ ದಿವ್ಯ ಮುತ್ತಪ್ಪ ಡ್ರೈವರ್ ಹಾಗೂ ಉದ್ಧಪಂಡ ಚೇತನ್ ಚಂಗಪ್ಪ ಕೋಡ್ರೈವರಾಗಿ ಲೇಡೀಸ್ ಕ್ಲಾಸ್ ನಲ್ಲಿ ಪ್ರಥಮ ಸ್ಥಾನ ಪಡೆದರು. ಮಂಡೆಪಂಡ ಸ್ಟಾಕ್ ಡೀಸೆಲ್ ಕ್ಲಾಸ್ ನಲ್ಲಿ ಮಿಥುನ್ ಕಾರ್ಯಪ್ಪ ಡ್ರೈವರ್ ಹಾಗೂ ಬೊಪ್ಪಂಡ ಸೋನು ಪೊನ್ನಪ್ಪ ಕೋಡ್ರೈವರಾಗಿ ಎರಡನೇ ಸ್ಥಾನ ಪಡೆದಿದ್ದಾರೆ. ಕೊಡಗಿನ “ವಿ 5 ಆಫ್ ರೋಡ್ ಕೂರ್ಗ್” ಟೀಮ್ ನ ಚೇತನ್ ಚಂಗಪ್ಪ, ಮಿಥುನ್ ಕಾರ್ಯಪ್ಪ ಸೋನು ಪೊನ್ನಪ್ಪ, ದಿವ್ಯ ಮುತ್ತಪ್ಪ, ಗೋಣಿಕೊಪ್ಪದ ಎಸ್.ಎಸ್.ಆಟೋ ಗ್ಯಾರೇಜ್ ನ ಮಾಲೀಕರಾದ ಸನೋಜ್ ಸಹದೇವನ್, ರಮೇಶ್ ರಾಮ್ ಹಾಗೂ ಅಪ್ಪಣ್ಣ ಬಾಚಮಡ, ಮೋಹಿತ್, ಅಭಿಷೇಕ್ ಉತ್ತಪ್ಪ ಪೆಮ್ಮುಡಿಯಂಡ ರ್ಯಾಲಿಯಲ್ಲಿ ಭಾಗವಹಿಸಿದರು.
ವರದಿ : ಕರುಣ್ ಕಾಳಯ್ಯ