ಸೋಮವಾರಪೇಟೆ ಸೆ.27 NEWS DESK : ಮೀನುಗಾರಿಕೆ ಇಲಾಖೆ, ಬೆಂಗಳೂರು ಐಸಿಎಆರ್ ಒಳನಾಡು ಮೀನುಗಾರಿಕೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಪರಿಶಿಷ್ಟ ಪಂಗಡದ ಮೀನುಗಾರರಿಗೆ ಐಸ್ ಬಾಕ್ಸ್ ಮತ್ತು ಕ್ರೇಟ್ ಗಳನ್ನು ವಿತರಿಸಲಾಯಿತು. ಗಿರಿಜನ ಉಪಯೋಜನೆ ಅಡಿಯಲ್ಲಿ ಜಲಾಶಯಗಳಲ್ಲಿ ಹಿಡಿಯುವ ಮೀನುಗಳು ತಾಜಾವಾಗಿ ಮತ್ತು ಉತ್ತಮ ಗುಣಮಟ್ಟದಲ್ಲಿ ಗ್ರಾಹಕರನ್ನು ತಲುಪಬೇಕು ಎನ್ನುವ ಉದ್ದೇಶದಿಂದ ಕ್ರೇಟ್ ಮತ್ತು ಐಸ್ ಬಾಕ್ಸ್‍ಗಳನ್ನು ವಿತರಿಸಲಾಗಿದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಮಿಲನ ಭರತ್ ಹೇಳಿದರು. ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪರಮೇಶ ಕುಮಾರ್ ಮೀನುಗಾರರು ಹೊಂದಬಹುದಾದ ಕೌಶಲಾಭಿವೃದ್ಧಿ, ಜಲಾಶಯಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಯ ಕುರಿತು ಮಾತನಾಡಿದರು. ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿಗಳಾದ ಡಾ.ಪ್ರೀತಾ ಪಣಿಕ್ಕರ್, ವಿಜ್ಞಾನಿಗಳಾದ ಡಾ.ರಮ್ಯ, ಜೇಷ್ನಾ, ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಇದ್ದರು.