ನಾಪೋಕ್ಲು ಸೆ.28 NEWS DESK : ನಾಪೋಕ್ಲು ನಾಡು ಗ್ರಾಹಕರ ಸಂಘವು 2023-24ನೇ ಸಾಲಿನಲ್ಲಿ 2.37 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ ಹೇಳಿದರು. ನಾಪೋಕ್ಲು ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ 639 ಮಂದಿ ಸದಸ್ಯರಿದ್ದು, ದುಡಿಯುವ ಬಂಡವಾಳ 56.49 ಲಕ್ಷ ರೂ.ಗಳಾಗಿವೆ ಎಂದರು. ಸಂಘವು ಸುಸಜ್ಜಿತವಾದ ಕಟ್ಟಡ ಹೊಂದಿದ್ದು, ಸಂಘದ ಮಳಿಗೆಯಲ್ಲಿ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸರ್ಕಾರದ ನ್ಯಾಯಬೆಲೆ ಅಂಗಡಿಯನ್ನು ಹೊಂದಿದ್ದು ಪಡಿತರವನ್ನು ವಿತರಿಸಲಾಗುತ್ತಿದೆ ಎಂದು ಸಂಘದ ಸಮಗ್ರ ಮಾಹಿತಿಯನ್ನು ನೀಡಿ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ಕೋರಿದರು. ಸಭೆಯಲ್ಲಿ ಸಂಘದ ಶ್ರೇಯೋಭಿವೃದ್ಧಿಯ ಬಗ್ಗೆ ಚರ್ಚಿಸಿ ಬಳಿಕ ಎಲ್ಲರ ಒಪ್ಪಿಗೆ ಪಡೆದು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಯಿತು. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಈ ಸಂದರ್ಭ ಉಪಾಧ್ಯಕ್ಷೆ ನಾಟೋಳಂಡ ಕಸ್ತೂರಿ, ನಿರ್ದೇಶಕರಾದ ಕೊಂಬಂಡ ಗಣೇಶ್, ಕುಲ್ಲೆಟ್ಟೀರ ಅರುಣ್ ಬೇಬ, ನಾಯಕಂಡ ಮುತ್ತಪ್ಪ, ಬೊಟ್ಟೋಳಂಡ ಕುಟ್ಟಪ್ಪ, ಪಾಡಿಯಮ್ಮಂಡ ಮನು ಮಹೇಶ್, ಕೇಟೋಳಿರ ಮುತ್ತಮ್ಮ, ಹೆಚ್.ಎ.ಬೊಳ್ಳು, ಬಿ.ಆರ್.ರಾಮಣ್ಣ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಲ್ಲೇಂಗಡ ತಿಮ್ಮಯ್ಯ, ಸಿಬ್ಬಂದಿ ಮುಕ್ಕಾಟಿರ ರಾಜಪ್ಪ, ತಟ್ಟಂಡ ಮುತ್ತಪ್ಪ ಹಾಜರಿದ್ದರು. ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಪ್ರಾರ್ಥಿಸಿದರು. ಪಟ್ರಪಂಡ ಮೋಹನ್ ಮುದ್ದಪ್ಪ ಸ್ವಾಗತಿಸಿದರು. ಕಲ್ಲೇಂಗಡ ತಿಮ್ಮಯ್ಯ ವಾರ್ಷಿಕ ವರದಿ ವಾಚನ ಮಾಡಿದರು. ಕೊಂಬಂಡ ಗಣೇಶ ವಂದಿಸಿದರು.
ವರದಿ : ದುಗ್ಗಳ ಸದಾನಂದ