ಮಡಿಕೇರಿ ಅ.5 NEWS DESK : ನಗರ ದಸರಾ ಸಮಿತಿ ವತಿಯಿಂದ ಅ.6 ರಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿ ಮೈದಾನ ಕಲಾ ಸಂಭ್ರಮ ವೇದಿಕೆಯಲ್ಲಿ ಮೊದಲ ವರ್ಷದ ಕಾಫಿ ದಸರಾ ನಡೆಯಲಿದೆ. ಕಾಫಿ, ಕೃಷಿ ಸಂಬಂಧಿತ ಉಪಯುಕ್ತ ಮಾಹಿತಿಯುಳ್ಳ ಪ್ರದರ್ಶನ ಮಳಿಗೆಗಳು, ಕಾಫಿ, ವಿವಿಧ ಕೃಷಿ ಸಂಬಂಧಿತ ವಿಚಾರ ಸಂಕಿರಣ ನಡೆಯಲಿದೆ ಎಂದು ದಸರಾ ಸಮಿತಿ ತಿಳಿಸಿದೆ.










