ಮಡಿಕೇರಿ ಅ.5 NEWS DESK : ಮಡಿಕೇರಿ ದಸರಾದಲ್ಲಿ ಅ.6 ರಂದು ಬೆಳಗ್ಗೆ 10 ಗಂಟೆಗೆ ಕಾಫಿ ದಸರಾ ಎಂಬ ವಿನೂತನ ಕಾಯ೯ಕ್ರಮಕ್ಕೆ ಚಾಲನೆ ದೊರಕುತ್ತಿದೆ, ಶಾಸಕ ಡಾ.ಮಂತರ್ ಗೌಡ ಮಾಗ೯ದಶ೯ನದಲ್ಲಿ ದಸರಾ ಸಾಂಸ್ಕೃತಿಕ ಸಮಿತಿಯು ಜಿಲ್ಲಾಧಿಕಾರಿ ಮತ್ತು ನಗರ ದಸರಾ ಸಮಿತಿ ಸಹಯೋಗದಲ್ಲಿ ಕಾಫಿ ದಸರಾಕ್ಕೆ ಸವ೯ಸಿದ್ದತೆ ಕೈಗೊಂಡಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ.ಮಾಹಿತಿ ನೀಡಿದ್ದಾರೆ. ಈ ವಷ೯ದಿಂದ ಕಾಫಿ ದಸರಾ ಎಂಬ ವಿನೂತನ ಕಾಯ೯ಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು ಅ.6 ಮತ್ತು 7 ರಂದು ಆಯೋಜಿತ ಕಾಫಿ ದಸರಾದಲ್ಲಿ ಕಾಫಿ ಮತ್ತು ಇತರ ಕೃಷಿಗೆ ಸಂಬಂಧಿಸಿದಂತೆ ಅನೇಕ ಮಾಹಿತಿ ಕೖಷಿಕರಿಗೆ ದೊರಕಲಿದೆ, ಜಿಲ್ಲೆಯ 12 ಮಂದಿ ಸಾಧಕ ಕೖಷಿಕರನ್ನೂ ಕಾಫಿ ದಸರಾ ಸಂದಭ೯ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಕಾಫಿ ದಸರಾಕ್ಕೆ ಕಾಫಿ ಮಂಡಳಿ, ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್, ಕೊಡಗು ಪ್ಲಾಂಟಸ್೯ ಅಸೋಸಿಯೇಷನ್ ಸೇರಿದಂತೆ ಕಾಫಿ ವಲಯದಿಂದ ಉತ್ತಮ ಸ್ಪಂದನ ದೊರಕಿದೆ, ಈಗಾಗಲೇ 32 ಮಳಿಗೆಗಳು ಭತಿ೯ಯಾಗಿದ್ದು, ಕಾಫಿ, ಹೈನುಗಾರಿಕೆ, ಬಿದಿರು, ತೋಟಗಾರಿಕಾ ಬೆಳೆಗಳು, ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಈ ಮಳಿಗೆಗಳಲ್ಲಿ ದೊರಕಲಿದೆ, ತೋಟಗಾರಿಕಾ ಇಲಾಖೆ, ಕೖಷಿ ಇಲಾಖೆ, ಮೀನುಗಾರಿಕಾ ಇಲಾಖೆ, ಪಶುಪಾಲನಾ ಇಲಾಖೆ, ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರ ಸೇರಿದಂತೆ ಅನೇಕ ಇಲಾಖೆಗಳು ಕಾಫಿ ದಸರಾದಲ್ಲಿ ಮಳಿಗೆಗಳು 6 ಮತ್ತು 7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತವೆ. ಅ.6 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ರಾಜ್ಯ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿ ಮತ್ತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಗಾಂಧಿ ಮೈದಾನದಲ್ಲಿ ಕಾಫಿ ದಸರಾ ಕಾಯ೯ಕ್ರಮ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11, ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಕಾಫಿ ಮತ್ತು ಕೖಷಿ ಸಂಬಂಧಿತ ವಿಚಾರಸಂಕಿರಣ ನಡೆಯಲಿದ್ದು, ಸಭಾ ಕಾಯ೯ಕ್ರಮದಲ್ಲಿ ಸಚಿವದ್ವಯರ ಜತೆಗೆ ಶಾಸಕರಾದ ಡಾ, ಮಂಥರ್ ಗೌಡ, ಎ.ಎಸ್.ಪೊನ್ನಣ್ಣ, ಸುಜಾಕುಶಾಲಪ್ಪ, ಬೋಜೇಗೌಡ, ಡಾ.ಧನಂಜಯ್ ಸಜಿ೯, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ದೇವವೖಂದ, ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ಕೆ ರಾಜೀವ್, , ಕೊಡಗು ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷರಾದ ನಂದಾಬೆಳ್ಯಪ್ಪ, ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ, ಅಂದು 11 ಗಂಟೆಯಿಂದ 12.30 ಗಂಟೆಯವರೆಗೆ ವಿಚಾರಸಂಕಿರಣದಲ್ಲಿ ಕೃಷಿ ರಂಗದ ಪರಿಣಿತರಾದ ಧಮ೯ರಾಜ್, ಡಾ.ಕೆಂಚರೆಡ್ಡಿ, ಕೆ.ಕೆ.ವಿಶ್ವನಾಥ್ ಮಾಹಿತಿ ವಿನಿಮಯ ಮಾಡಲಿದ್ದಾರೆ. ಸಂಜೆ 6.30 ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾಯ೯ಕ್ರಗಳು ಆಯೋಜಿತವಾಗಿದೆ, ಸರಿಗಮಪ ಕಲಾವಿದರಾದ ಮಹೇಂದ್ರ, ದಿವ್ಯ ಹೆಗಡೆ , ಪ್ರಿಯಾ ಕುಂದಾಪುರಸ ಮೆಹಬೂಬ ಸಾಬ್, ರವಿಕುಮಾರ್, ಪ್ರಗತಿ ಬಡಿಗೇರ, ಮಿಂಚು ತಂಡದಿಂದ ಸಂಗೀತ ಸಂಜೆ ಆಯೋಜಿತವಾಗಿದೆ, ಗಾನನೖತ್ಯ ಅಕಾಡೆಮಿಯಿಂದ ನೖತ್ಯ ವೈವಿಧ್ಯ, ಬೆಂಗಳೂರಿನ ಟಿಂ ಪೊನ್ನಿಧ್ವನಿ ತಂಡದಿಂದ ಕೊಡಗಿನ ಸಾಂಸ್ಕೃತಿಕ ನೖತ್ಯ, ಕಲ್ಲುಗುಂಡಿಯ ನಟರಾಜ ನಾಟ್ಯ ನಿಕೇತನ ತಂಡದಿಂದ ಶ್ರೀದೇವಿ ನೖತ್ಯ, ಮೂನಾ೯ಡಿನ ಸಂಸ್ಕೃತಿ ಸಿರಿ ಟ್ರಸ್ಟ್ ನಿಂದ ಯಕ್ಷ ನೖತ್ಯ ಆಯೋಜಿತವಾಗಿದೆ.