ಮಡಿಕೇರಿ ಅ.14 NEWS DESK : ಮಡಿಕೇರಿ ದಸರಾ ಜನೋತ್ಸವ ಸಂದಭ೯ 9 ದಿನಗಳು ಸಾಂಸ್ಕೃತಿಕ ಕಾಯ೯ಕ್ರಮಗಳನ್ನು ವ್ಯವಸ್ಥಿತವಾಗಿ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ ಅವರನ್ನು ಸಾಂಸ್ಕೃತಿಕ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕಾಯ೯ಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಪರವಾಗಿ ಅನಿಲ್ ಅವರಿಗೆ ಜಿಲ್ಲಾಧಿಕಾರಿ ಮತ್ತು ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ವೆಂಕಟ್‌ರಾಜಾ ಸನ್ಮಾನಿಸಿ ಗೌರವಿಸಿದರು. ಯಾವುದೇ ಸಮಸ್ಯೆಯಿಲ್ಲದಂತೆ ಈ ಬಾರಿ ಸಾಂಸ್ಕೃತಿಕ ಕಾಯ೯ಕ್ರಮಗಳೂ ಭವ್ಯ ವೇದಿಕೆಯಲ್ಲಿ ಆಯೋಜಿತವಾಗಿ ಜನಮನ ಗೆದ್ದಿದೆ. ಇದಕ್ಕಾಗಿ ಸಮಿತಿ ಸದಸ್ಯರು, ವೇದಿಕೆ, ಸ್ವಾಗತ ಸಮಿತಿಯವರಿಗೂ ಅಭಿನಂದನೆ ಸಲ್ಲಿಸುವುದಾಗಿಯೂ ಜಿಲ್ಲಾಧಿಕಾರಿಗಳು ನುಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿಲ್ ಹೆಚ್.ಟಿ ಮಾತನಾಡಿ, ಸ್ಥಳೀಯ ಪ್ರತಿಭೆಗಳ ಜತೆಗೇ ರಾಷ್ಟ್ರ ಮತ್ತು ರಾಜ್ಯಮಟ್ಟದ ಖ್ಯಾತ ಕಲಾವಿದರನ್ನು ದಸರಾ ವೇದಿಕೆಗೆ ಆಹ್ವಾನಿಸಿ ಕಾಯ೯ಕ್ರಮ ನೀಡುವಲ್ಲಿ ಶಾಸಕ ಡಾ.ಮಂಥರ್ ಗೌಡ ಮತ್ತು ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಪೌರಾಯುಕ್ತ ರಮೇಶ್ ಹಾಗೂ ದಸರಾ ಸಮಿತಿ ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ಪ್ರಧಾನ ಕಾಯ೯ದಶಿ೯ ಬಿ.ವೈ.ರಾಜೇಶ್ ಮತ್ತು ಖಜಾಂಚಿ ಅರುಣ್ ಶೆಟ್ಟಿಯವರ ಸಹಕಾರ ಇತ್ತು. ಮಕ್ಕಳ ದಸರಾ, ಜಾನಪದ ಮತ್ತು ಮಹಿಳಾ ದಸರಾವನ್ನು ಮಡಿಕೇರಿ ದಸರಾಕ್ಕೆ ಪರಿಚಯಿಸಿದ ಹೆಮ್ಮೆಯ ಜತೆಗೇ ಈ ಬಾರಿ ಶಾಸಕ ಮಂಥರ್ ಗೌಡ ಪರಿಕಲ್ಪನೆಯಾದ ಕಾಫಿ ದಸರಾಕ್ಕೂ ಸಂಚಾಲಕನಾಗಿ ಕಾಫಿ ದಸರವನ್ನಾ ಯಶಸ್ವಿಯಾಗಿ ಜಿಲ್ಲಾಡಳಿತದ ಸಹಕಾರದೊಂದಿಗೆ, ಕನಾ೯ಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕೊಡಗು ಪ್ಲಾಂಟಸ್೯ ಅಸೋಸಿಯೇಷನ್, ಕಾಫಿ ಮಂಡಳಿ, ತೋಟಗಾರಿಕೆ, ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಇಲಾಖೆಗಳ ಸಹಕಾರದಲ್ಲಿ ಆಯೋಜಿಸಲಾಗಿದೆ, ಮಡಿಕೇರಿ ದಸರಾಕ್ಕೆ ಈ ಬಾರಿ ಹೊಸ ಆಯಾಮ ಕೂಡ ದೊರಕಿದೆ ಎಂದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ತೆನ್ನೀರ ಮೈನಾ ಮಾತನಾಡಿ, ಈ ವಷ೯ 82 ಕಲಾವಿದರು ಕಾಯ೯ಕ್ರಮ ನೀಡಲು ಅಜಿ೯ ಸಲ್ಲಿಸಿದ್ದರು, ಸಮಿತಿ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿದ ಕಲಾತಂಡಗಳು ಯಶಸ್ವಿಯಾಗಿ ಪ್ರದಶ೯ನ ನೀಡಿದ ಹೆಮ್ಮೆ ಸದಸ್ಯ ತಂಡಕ್ಕಿದೆ ಎಂದರು.ಇದೇ ಸಂದಭ೯ ಪೌರಾಯುಕ್ತ ರಮೇಶ್, ದಸರಾ ಸಭಾಂಗಣದ ಶುಚಿತ್ವದಲ್ಲಿ ಗಮನ ಹರಿಸಿದ ನಗರಸಭಾ ಸಿಬ್ಬಂದಿ ಹೆಚ್.ಡಿ.ರಂಗಪ್ಪ, ಲೋಕೇಶ್, ಪೌರಸಿಬ್ಬಂದಿಗಳಾದ ಎಚ್.ಎನ್, ಶಿವಕುಮಾರ್ ಎಚ್.ಎಂ, ಭೀಮುಪ್ಪ, ಭಾಗ್ಯ, ಅಂಚನ, ನಾಗಪ್ಪ, ಪ್ರಮೋದ್, ಮಂಜುಳಾ, ಸುಶೀಲಾ , ನಗರಸಭಾ ಸಿಬ್ಬಂದಿ ಅಕ್ರಂ, ವಾತಾ೯ಧಿಕಾರಿ ಚಿನ್ನಸ್ವಾಮಿ ಅವರಿಗೆ ಸ್ಮರಣಿಗೆ ನೀಡಿ ಜಿಲ್ಲಾಧಿಕಾರಿಗಳು ದಸರಾ ಸಮಿತಿ ವತಿಯಿಂದ ಕೖತಜ್ಞತೆ ಸಲ್ಲಿಸಿದರು. ಮಡಿಕೇರಿ ದಸರಾ ಸಮಿತಿ ಖಜಾಂಚಿ ಅರುಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಸದಸ್ಯರಾದ ವೀಣಾಕ್ಷಿ ರವಿಕುಮಾರ್, ಲೀಲಾಶೇಷಮ್ಮ, ಕುಡೆಕಲ್ ಸಂತೋಷ್, ಭಾರತಿ ರಮೇಶ್, ಮಿನಾಜ್ ಪ್ರವೀಣ್, ಸತ್ಯ ಮಂಜು, ರೇವತಿ ರಮೇಶ್, ದಿವಾಕರ್, ವಿನು, ಅಜು೯ನ್ ರಾಜೇಂದ್ರ, ರೂಪಸುಬ್ಬಯ್ಯ, ವೇದಿಕೆ ಸಮಿತಿ ಅಧ್ಯಕ್ಷೆ ಕನ್ನಂಡ ಕವಿತಾ, ಸ್ವಾಗತ ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕಕೇ೯ರಾ, ಅಲಂಕಾರ ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ಹಾಜರಿದ್ದರು.