ಮಡಿಕೇರಿ ಅ.17 NEWS DESK : ಕಾವೇರಿ ತೀರ್ಥೋದ್ಭವ ಹಿನ್ನೆಲೆ ವಿರಾಜಪೇಟೆಯಿಂದ ತಲಕಾವೇರಿವರೆಗೆ ಆರು ಯುವಕರು 4ನೇ ವರ್ಷದ ಪಾದಯಾತ್ರೆ ಪಾದಯಾತ್ರೆ ಮಾಡಿದರು. ವಿರಾಜಪೇಟೆಯ ಚೆಟ್ಟೊಳಿರ ಶರತ್ ಸೋಮಣ್ಣ, ಮುರುವಂಡ ಸಾವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ, ಮುಕ್ಕಾಟಿರ ಉತ್ತಪ್ಪ, ಮುರುವಂಡ ಸ್ಪೂರ್ತಿ ಸೀತಮ್ಮ, ಪೊರುಕೊಂಡ ಶಾನ್ ನಾಣಯ್ಯ ಕಾವೇರಿ ತೀರ್ಥೋದ್ಭವದ ಹಿನ್ನೆಲೆ ವಿರಾಜಪೇಟೆಯಿಂದ ಸುಮಾರು 58 ಕಿಮೀ ಪಾದಯಾತ್ರೆ ಕೈಗೊಂಡಿದ್ದರು. ಬುಧವಾರ ಮುಂಜಾನೆಯಿಂದಲೇ ವಿರಾಜಪೇಟೆಯಿಂದ ಪಾದಯಾತ್ರೆ ಕೈಗೊಂಡು ಕದನೂರು, ಕಡಂಗ, ನಾಪೋಕ್ಲು, ಬಲ್ಲಮಾವಟಿ, ಅಯ್ಯಂಗೇರಿ ಮೂಲಕ ಭಾಗಮಂಡಲಕ್ಕೆ ಸಂಜೆ 6.30 ಗಂಟೆಗೆ ತಲುಪಿದ್ದು, ಗುರುವಾರ ಭಾಗಮಂಡಲದಿಂದ ಹಲವು ಸಂಘಟನೆಯೊಂದಿಗೆ ಕಾವೇರಿ ಭಜನೆಯ ಮೂಲಕ ಪಾದಯಾತ್ರೆ ಮುಂದುವರಿಸಿ ತೀರ್ಥೋದ್ಭವ ಮುನ್ನ ತಲಕಾವೇರಿಗೆ ತಲುಪಿದರು. ಕಾವೇರಿಯ ಪವಿತ್ರ ತೀರ್ಥವನ್ನು ಪಡೆದು, ಹಲವೆಡೆ ವಿತರಿಸಿದರು.