Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ*
  • *ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ ರಾಜಕೀಯ ಪ್ರೇರಿತ: ಮಾನವ ಬಂಧುತ್ವ ವೇದಿಕೆ ಆರೋಪ*
  • *ಮಡಿಕೇರಿ : ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ; ಸಾರ್ವಜನಿಕ ಅಹವಾಲು ಆಲಿಸಿದ ಲೋಕಾಯುಕ್ತ*
  • *ಕ.ಸಾ.ಪ. ವತಿಯಿಂದ ತ್ರಿಭಾಷಾ ಸಾಹಿತಿ ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ; ವಿ.ಎಸ್. ರಾಮಕೃಷ್ಣ ಕೊಡಗಿನ ಮೇರು ಸಾಹಿತಿ: ಟಿ.ಜಿ. ಪ್ರೇಮಕುಮಾರ್ ಬಣ್ಣನೆ*
  • *ಬೇಟೋಳಿ : ರೈತರೊಂದಿಗೆ ಕಂಪನಿಗಳು ಕೈಜೋಡಿಸಿದರೆ ಕೃಷಿಯಲ್ಲಿ ಅಭಿವೃದ್ಧಿ ಸಾಧ್ಯ: ಪೂಜಾ ಸಜೇಶ್*
  • *ಅಭಿಮನ್ಯುವಿಗೆ ಅಕ್ಷರತೇರಿನ ಬೀಳ್ಕೊಡುಗೆ; ಹಿರಿಯ ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪರ ಅಭಿಮನ್ಯು ಕುರಿತ ಎರಡು ಕೃತಿಗಳ ಬಿಡುಗಡೆ; `ಮೌನದ ಮಹಾ ಪಯಣ’ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿ*
  •  *ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ; ಗಮನಸೆಳೆದ ಮೊಸರು ಕುಡಿಕೆ ಹಾಗೂ ಮಕ್ಕಳ ಛದ್ಮವೇಷ ಸ್ಪರ್ಧೆ*
  • *ಜೇನುಕಲ್ಲು ಹಾಲು ಉತ್ಪಾದಕರ ಸಂಘಕ್ಕೆ ರೂ.6.78 ಲಕ್ಷ ಲಾಭ*
  • **ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ**
  • *ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿ : ರಾಮಾಯಣವನ್ನು ಜಗತ್ತಿಗೆ ಪಸರಿಸಿದ ಶ್ರೇಷ್ಠ ಕವಿ ಶ್ರೀ ಮಹರ್ಷಿ ವಾಲ್ಮೀಕಿ : ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿ : ರಾಮಾಯಣವನ್ನು ಜಗತ್ತಿಗೆ ಪಸರಿಸಿದ ಶ್ರೇಷ್ಠ ಕವಿ ಶ್ರೀ ಮಹರ್ಷಿ ವಾಲ್ಮೀಕಿ : ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು*

ಅಕ್ಟೋಬರ್ 17, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.17 NEWS DESK : ರಾಷ್ಟ್ರದ ಆದಿಕವಿ, ರಾಮಾಯಣ ಮಹಾಕಾವ್ಯ ಬರೆದ ಶ್ರೇಷ್ಠ ಕವಿ ವಾಲ್ಮೀಕಿ ಅವರು ಹುಟ್ಟಿದ ದಿನವನ್ನು ನಾಡಿನ ಎಲ್ಲೆಡೆ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು 24 ಸಾವಿರ ಸಂಸ್ಕೃತ ಶ್ಲೋಕಗಳ ಒಂದು ಬೃಹತ್ ಗ್ರಂಥವನ್ನು ರಚಿಸಿರುವುದು ವಿಶೇಷವಾಗಿದೆ ಎಂದು ಎನ್.ಎಸ್.ಭೋಸರಾಜು ತಿಳಿಸಿದರು. ಮಹರ್ಷಿ ವಾಲ್ಮೀಕಿಯವರು ರಾಮಾಯಣವನ್ನು ವಿದ್ವತ್ ಪೂರ್ಣವಾಗಿ ಬರೆದಿದ್ದಾರೆ. ರಾಮಾಯಣ ಬರೆಯುವಲ್ಲಿ ಸಾಕಷ್ಟು ಪರಿಶ್ರಮ ವಹಿಸಿದ್ದಾರೆ ಎಂದು ಸಚಿವರು ನುಡಿದರು. ವಾಲ್ಮೀಕಿಯ ಮಾತೃ ವಾತ್ಸಲ್ಯದ ಕುರಿತು ರಾಮಾಯಣದಲ್ಲಿಯೇ ಸಾಕಷ್ಟು ಮಾಹಿತಿ ಸಿಗುತ್ತದೆ. ಪುರಾಣ ಮತ್ತು ಐತಿಹ್ಯಗಳ ವಿಭಿನ್ನ ನಿರೂಪಣೆಗಳ ನಡುವೆ ವಾಲ್ಮೀಕಿ ಹೇಗೆ ಪ್ರಸ್ತುತರಾಗುತ್ತಾರೆ ಎಂಬುದನ್ನು ನಾವೆಲ್ಲಾ ಅರಿತುಕೊಳ್ಳಬೇಕು. ವಾಲ್ಮೀಕಿಯವರ ಚಿಂತನೆಗಳು, ಬರವಣಿಗೆಗಳನ್ನು ಹೆಚ್ಚು ಅಧ್ಯಯನ ಮಾಡಬೇಕು ಎಂದು ನುಡಿದರು. ಶಾಸಕ ಡಾ.ಮಂತರ್‍ಗೌಡ ಮಾತನಾಡಿ ಮಹರ್ಷಿ ವಾಲ್ಮೀಕಿ ಅವರು ಸಾವಿರಾರು ವರ್ಷಗಳ ಹಿಂದೆಯೇ ರಾಮಾಯಣ ಬರೆದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಅಖಂಡ ಭಾರತದಲ್ಲಿ ಮಹರ್ಷಿ ವಾಲ್ಮೀಕಿ ಅವರು ತೋರಿಸಿರುವ ದಾರಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಇಡೀ ದಕ್ಷಿಣ ಏಷ್ಯಾದಲ್ಲಿಯೇ ವಾಲ್ಮೀಕಿ ರಾಮಾಯಣ ಕಥೆಯನ್ನು ಕಾಣಬಹುದಾಗಿದೆ ಎಂದು ಶಾಸಕರು ವಿವರಿಸಿದರು. ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಕೆ.ಆರ್.ಭಾರತಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ರಾಮಾಯಣದ ಮೂಲಕ ಎಲ್ಲೆಡೆ ಕಾಣಬಹುದಾಗಿದೆ. ಅವರ ಆದರ್ಶ ಗುಣಗಳು ಇಂದಿಗೂ ಮಾದರಿಯಾಗಿದೆ ಎಂದು ನುಡಿದರು. ಭಾರತೀಯರಾದ ಪ್ರತಿಯೊಬ್ಬರೂ ರಾಮಾಯಣ ಮತ್ತು ಮಹಾಭಾರತವನ್ನು ಅಧ್ಯಯನ ಮಾಡಬೇಕು. ಸಮಾಜದಲ್ಲಿ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದಾಗಿದೆ. ರಾಮಾಯಣ ಮಹಾಗ್ರಂಥದಲ್ಲಿ ಭಾರತೀಯ ಸಂಸ್ಕೃತಿಯನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಸಾಮಾನ್ಯ ಕುಟುಂಬದಿಂದ ಬಂದ ಮಹರ್ಷಿ ವಾಲ್ಮೀಕಿ ಅವರು ಹಲವು ಶ್ಲೋಕಗಳನ್ನು ಬರೆಯುವ ಮೂಲಕ, ರಾಮಾಯಣ ಮಹತ್ವವನ್ನು ಕಾಣಬಹುದಾಗಿದೆ ಎಂದು ಭಾರತಿ ಅವರು ವಿವರಿಸಿದರು. ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಅಶೋಕ್ ಮಾತನಾಡಿ ವಾಲ್ಮೀಕಿ ರಾಮಾಯಣವು ಇಂದಿಗೂ ಸಹ ಪ್ರಸ್ತುತವಾಗಿದ್ದು, ಬದುಕಿನಲ್ಲಿ ತನ್ನದೇ ಆದ ಪ್ರಭಾವ ಬೀರಿದೆ ಎಂದು ತಿಳಿಸಿದರು. `ವಾಲ್ಮೀಕಿ ಸಮಾಜವು ಗುರುಭಕ್ತಿಗೆ ಬೆರಳುಕೊಟ್ಟ, ದೈವಭಕ್ತಿಗೆ ಕಣ್ಣು ಕೊಟ್ಟ, ರಕ್ಷಣೆಗಾಗಿ ಖಡ್ಗ ಹಿಡಿದ, ಸನ್ಮಾರ್ಗಕ್ಕಾಗಿ ಧರ್ಮಗ್ರಂಥ ರಚಿಸಿದ ಸಮಾಜವಾಗಿದೆ ಎಂದು ಅಶೋಕ್ ಅವರು ವಿವರಿಸಿದರು.’ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪೌರ ಕಾರ್ಮಿಕರು, ಪರಿಶಿಷ್ಟ ಪಂಗಡದ ರೈತರು ಹಾಗೂ ಸೈನಿಕರು ಈ ವಿಭಾಗದಲ್ಲಿ ತಲಾ ಒಬ್ಬರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.ಅಂತರ್ ಜಾತಿ ವಿವಾಹಿತ 10 ದಂಪತಿಗಳಿಗೆ ತಲಾ 3 ಲಕ್ಷ ರೂ. ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ಚೆನ್ನಂಗಿ ಬಸವನಹಳ್ಳಿ ಸರ್ಕಾರಿ ವಸತಿ ಶಾಲೆ, ಮರೂರು ತಿತಿಮತಿ ವಸತಿ ಶಾಲೆ, ಕೋತೂರು ವಾಲ್ಮೀಕಿ ಆಶ್ರಮ ಶಾಲೆ, ಕರಿಕೆ ಆಶ್ರಮ ಶಾಲೆ, ಮೊರಾಜಿ ದೇಸಾಯಿ ವಸತಿ ಶಾಲೆ ಹಾಗೂ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ನೃತ್ಯ ಪ್ರದರ್ಶನ ಗಮನ ಸೆಳೆದರು. ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಪ್ರಮುಖರಾದ ಪರಮೇಶ್, ಗಂಗಾಧರ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಇತರರು ಇದ್ದರು. ಪವನ್ ಕುಮಾರ್ ನಿರೂಪಿಸಿದರು. ಹೊನ್ನೇಗೌಡ ಸ್ವಾಗತಿಸಿದರು. ಬಾಳುಗೋಡು ಏಕಲವ್ಯ ವಸತಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಬಾಳುಗೋಡು ವಸತಿ ಶಾಲೆಯ ಪ್ರಾಂಶುಪಾಲರಾದ ದಿಲನ್ ಮುತ್ತಣ್ಣ ವಂದಿಸಿದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ*

ಸೆಪ್ಟೆಂಬರ್ 9, 2026

*ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ ರಾಜಕೀಯ ಪ್ರೇರಿತ: ಮಾನವ ಬಂಧುತ್ವ ವೇದಿಕೆ ಆರೋಪ*

ಸೆಪ್ಟೆಂಬರ್ 9, 2026

*ಮಡಿಕೇರಿ : ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ; ಸಾರ್ವಜನಿಕ ಅಹವಾಲು ಆಲಿಸಿದ ಲೋಕಾಯುಕ್ತ*

ಸೆಪ್ಟೆಂಬರ್ 9, 2026

*ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ ರಾಜಕೀಯ ಪ್ರೇರಿತ: ಮಾನವ ಬಂಧುತ್ವ ವೇದಿಕೆ ಆರೋಪ*

ಸೆಪ್ಟೆಂಬರ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.9: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿರುವ…

*ಮಡಿಕೇರಿ : ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ; ಸಾರ್ವಜನಿಕ ಅಹವಾಲು ಆಲಿಸಿದ ಲೋಕಾಯುಕ್ತ*

ಸೆಪ್ಟೆಂಬರ್ 9, 2026

*ಕ.ಸಾ.ಪ. ವತಿಯಿಂದ ತ್ರಿಭಾಷಾ ಸಾಹಿತಿ ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ; ವಿ.ಎಸ್. ರಾಮಕೃಷ್ಣ ಕೊಡಗಿನ ಮೇರು ಸಾಹಿತಿ: ಟಿ.ಜಿ. ಪ್ರೇಮಕುಮಾರ್ ಬಣ್ಣನೆ*

ಸೆಪ್ಟೆಂಬರ್ 9, 2026

*ಬೇಟೋಳಿ : ರೈತರೊಂದಿಗೆ ಕಂಪನಿಗಳು ಕೈಜೋಡಿಸಿದರೆ ಕೃಷಿಯಲ್ಲಿ ಅಭಿವೃದ್ಧಿ ಸಾಧ್ಯ: ಪೂಜಾ ಸಜೇಶ್*

ಸೆಪ್ಟೆಂಬರ್ 9, 2026

*ಅಭಿಮನ್ಯುವಿಗೆ ಅಕ್ಷರತೇರಿನ ಬೀಳ್ಕೊಡುಗೆ; ಹಿರಿಯ ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪರ ಅಭಿಮನ್ಯು ಕುರಿತ ಎರಡು ಕೃತಿಗಳ ಬಿಡುಗಡೆ; `ಮೌನದ ಮಹಾ ಪಯಣ’ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿ*

ಸೆಪ್ಟೆಂಬರ್ 9, 2026

 *ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ; ಗಮನಸೆಳೆದ ಮೊಸರು ಕುಡಿಕೆ ಹಾಗೂ ಮಕ್ಕಳ ಛದ್ಮವೇಷ ಸ್ಪರ್ಧೆ*

ಸೆಪ್ಟೆಂಬರ್ 9, 2026

*ಜೇನುಕಲ್ಲು ಹಾಲು ಉತ್ಪಾದಕರ ಸಂಘಕ್ಕೆ ರೂ.6.78 ಲಕ್ಷ ಲಾಭ*

ಸೆಪ್ಟೆಂಬರ್ 9, 2026

**ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ**

ಸೆಪ್ಟೆಂಬರ್ 9, 2026

*ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ*

ಸೆಪ್ಟೆಂಬರ್ 9, 2026

*ದೇವಸ್ಥಾನಗಳ ಅಭಿವೃದ್ಧಿಗೆ 50 ಲಕ್ಷ ಅನುದಾನಕ್ಕೆ ಶಾಸಕ ಡಾ. ಮಂತರ್ ಗೌಡ ಮನವಿ*

ಸೆಪ್ಟೆಂಬರ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.