ವಿರಾಜಪೇಟೆ ಅ.18 NEWS DESK : ಹವಾಮಾನ ವೈಪರೀತ್ಯಗಳಿಂದ ಮತ್ತು ಬಾರಿ ಮಳೆಯ ಕಾರಣದಿಂದಾಗಿ ಗ್ರಾಮೀಣ ರಸ್ತೆಗಳು ಹಾನಿಯಾಗಿದ್ದು, ಮಳೆ ನಿಂತ ನಂತರದಲ್ಲಿ ಎಲ್ಲಾ ರಸ್ತೆಗಳು ಅಭಿವೃದ್ಧಿ ಹೊಂದಲಿದೆ ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಕಾರ್ಮಾಡು ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು 30ಲಕ್ಷ ರೂ.ವೆಚ್ಚದ ಒಟ್ಟು 6ಕಾಂಕ್ರೀಟ್ ರಸ್ತೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರ ನಿಧಿ ಯೋಜನೆ ಅಡಿಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಗಾಗಿ 17 ಕೋಟಿ ರೂಗಳು ಬಿಡುಗಡೆಗೊಳಿಸಿದ್ದು, ಕಾರ್ಮಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಸುಮಾರು 30 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಗೆ ಒತ್ತು ನೀಡಿ ಅಭಿವೃದ್ಧಿ ಪಥದಲ್ಲಿ ಕೊಂಡ್ಯೊಯಲು ಸಾರ್ವಜನಿಕರು ಕೈಜೋಡಿಸಿ ಎಂದು ಹೇಳಿದರು. ಕಾರ್ಮಾಡು ಗ್ರಾ.ಪಂ ಸದಸ್ಯ ಕೆ.ಎನ್.ಹಂಸ ಮಾತನಾಡಿ, ಹಲವು ವರ್ಷಗಳಿಂದ ಗ್ರಾ.ಪಂ ವ್ಯಾಪ್ತಿಯಲ್ಲಿ ರಸ್ತೆಗಳ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದ ಮೇರೆಗೆ ಶಾಸಕರು ಶೀಘ್ರಗತಿಯಲ್ಲಿ ರಸ್ತೆಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಿ ಇಂದು ಲೋಕಾರ್ಪಣೆ ಮಾಡಿರುತ್ತಾರೆ. ಗ್ರಾಮದ ಪರವಾಗಿ ಅನುದಾನ ತರುವಲ್ಲಿ ಶ್ರಮವಹಿಸಿದ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಹಾಗೂ ಶಾಸಕರಿಗೂ ಕೃತಜ್ಞತೆ ಸಲ್ಲಿಸಿದರು. ಬಿಳುಗುಂದ ಗ್ರಾ.ಪಂ ಸದಸ್ಯರಾದ ಐನಂಡ ರಂಜಿ, ಗುತ್ತಿಗೆದಾರ ನೆಲ್ಲಮಕ್ಕಡ ಸಾಗರ್, ಪಳೆಯತಂಡ ಹರಿ, ಪಕ್ಷ ಪ್ರಮುಖರಾದ ಡಿ.ಪಿ.ರಾಜೇಶ್, ಶಭರಿಶ್ ಶೆಟ್ಟಿ, ಜೋಕಿಂ ರೋಡ್ರಿಗೀಸ್ ಹಾಗೂ ಗ್ರಾಮದ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.