Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
  • *ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*
  • *ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*
  • *ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*
  • *ಕೊಡಗಿನಲ್ಲಿ ಮುಂಗಾರು ಮುಂಜಾಗ್ರತೆ : ಪೊಲೀಸ್ ಇಲಾಖೆಯಿಂದ ವಿಶೇಷ ಸಭೆ*
  • *ಭಾಗಮಂಡಲ : ಮೇ 11 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಮೇ 10 ರಂದು ಮೂರ್ನಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿ : ಮಾಸ್ಟರ್ಸ್ ಎಫ್.ಸಿ ಚಾಂಪಿಯನ್ಸ್, ರಾಕ್ ಸ್ಟಾರ್ ರನ್ನರ್ಸ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿ : ಮಾಸ್ಟರ್ಸ್ ಎಫ್.ಸಿ ಚಾಂಪಿಯನ್ಸ್, ರಾಕ್ ಸ್ಟಾರ್ ರನ್ನರ್ಸ್*

ನವೆಂಬರ್ 4, 20245 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.4 NEWS DESK : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ‌ಮಟ್ಟದ ಪತ್ರಕರ್ತರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇಸ್ಮಾಯಿಲ್ ಕಂಡಕರೆ ನಾಯಕತ್ವದ ಮಾಸ್ಟರ್ಸ್ ಎಫ್.ಸಿ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿದ್ದು, ಸುರ್ಜಿತ್ ನಾಯಕತ್ವದ ರಾಕ್ ಸ್ಟಾರ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.  ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಮಾಸ್ಟರ್ ಎಫ್.ಸಿ ತಂಡದ ಮುನ್ನಡೆ ಆಟಗಾರ ಸವಾದ್ ಉಸ್ಮಾನ್ ಮೊದಲಾರ್ಧದಲ್ಲಿ ಒಂದು ಗೋಲು ಬಾರಿಸಿ ಮಾಸ್ಟರ್ಸ್ ಎಫ್.ಸಿ ತಂಡಕ್ಕೆ ‌ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ಕೂಡ ಸವಾದ್ ಉಸ್ಮಾನ್ ಮತ್ತೊಂದು ಗೋಲು ಬಾರಿಸುವುದರ ಮೂಲಕ ಮಾಸ್ಟರ್ಸ್ ಎಫ್.ಸಿ ತಂಡವು 2-0 ಗೋಲುಗಳ ಅಂತರದಿಂದ ಫೈನಲ್ ಪಂದ್ಯವನ್ನು ಗೆದ್ದು ಚಾಂಪಿಯನ್ಸ್ ಪ್ರಶಸ್ತಿಯನ್ನು ಅಲಂಕರಿಸುವುದರ ಮೂಲಕ ಕೆನೇಡಿಯನ್ ಮಾದರಿಯ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ರಾಕ್ ಸ್ಟಾರ್ ತಂಡವು ಫೀನಿಕ್ಸ್ ಹಂಟರ್ ತಂಡವನ್ನು ಮಣಿಸಿತು. ಸೆಮಿಫೈನಲ್ ಪಂದ್ಯದ ಮೊದಲಾರ್ಧದಲ್ಲಿ ಫೀನಿಕ್ಸ್ ತಂಡದ ನಾಯಕ ವಿಜಯ್ ಅವರ ಆಕರ್ಷಕ ಗೋಲಿನ ನೆರವಿನಿಂದ ಮುನ್ನಡೆ ಪಡೆದಿದ್ದರು. ದ್ವಿತೀಯಾರ್ಧದಲ್ಲಿ ರಾಕ್ ಸ್ಟಾರ್ ತಂಡದ ಅಂತೋಣಿ ಬಾರಿಸಿದ ಗೋಲಿನ ನೆರವಿನಿಂದ ಸಮಬಲ ಸಾಧಿಸಿತು. ಅಂತಿಮವಾಗಿ ರಾಕ್ ಸ್ಟಾರ್ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ 4-3 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.  ಸೆಮಿಫೈನಲ್ ಪಂದ್ಯದ ಹಿರೋ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಅಂತೋಣಿ ಪಡೆದುಕೊಂಡರು. ಫೀನಿಕ್ಸ್ ಹಂಟರ್ ತಂಡವು ತೃತೀಯ ಸ್ಥಾನ ಪಡೆದುಕೊಂಡರೆ, ಮೀಡಿಯಾ ಯುನೈಟೆಡ್ ‌ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ವೈಯಕ್ತಿಕ ಪ್ರಶಸ್ತಿಗಳ ವಿವರ :: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಮೊದಲ ಬಾರಿಗೆ ನಡೆದ ಜಿಲ್ಲಾ‌ಮಟ್ಟದ ಪತ್ರಕರ್ತರ ಫುಟ್ಬಾಲ್ ಕಲರವದಲ್ಲಿ ಪ್ಲೇಯರ್ ಆಫ್ ದಿ-ಟೂರ್ನಮೆಂಟ್ ಪ್ರಶಸ್ತಿಯನ್ನು ಮಾಸ್ಟರ್ಸ್ ಎಫ್.ಸಿ ತಂಡದ ನಾಯಕ ಇಸ್ಮಾಯಿಲ್ ಕಂಡಕರೆ ಪಡೆದುಕೊಂಡರು. ಪಂದ್ಯಾವಳಿಯಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಮತ್ತು ಫೈನಲ್ ಪಂದ್ಯದ ಮ್ಯಾನ್ ಆಫ್-ದಿ ಮ್ಯಾಚ್ ಪ್ರಶಸ್ತಿಯನ್ನು ಮಾಸ್ಟರ್ಸ್ ಎಫ್.ಸಿ ತಂಡದ ಮುನ್ನಡೆ ಆಟಗಾರ ಸವಾದ್ ಉಸ್ಮಾನ್ ಪಡೆದುಕೊಂಡರು. ಅತ್ಯುತ್ತಮ ಡಿಫೆಂಡರ್ ರಾಕ್ ಸ್ಟಾರ್ ತಂಡದ ಸುರ್ಜಿತ್, ಅತ್ಯುತ್ತಮ ಮಹಿಳಾ ಆಟಗಾರ್ತಿ ಮಾಸ್ಟರ್ಸ್ ಎಫ್.ಸಿ ತಂಡದ ಉದಿಯಂಡ ಜಯಂತಿ, ಎಮೆರ್ಜಿಂಗ್ ಆಟಗಾರ ರಾಕ್ ಸ್ಟಾರ್ ತಂಡದ ಎ.ಎಸ್ ಮುಸ್ತಫಾ ಸಿದ್ದಾಪುರ ಹಾಗೂ ಅತ್ಯುತ್ತಮ ಗೋಲು ಕೀಪರ್ ಪ್ರಶಸ್ತಿಯನ್ನು ಫೀನಿಕ್ಸ್ ಹಂಟರ್ ತಂಡದ ಕಿರಣ್ ರಾಜ್ ಪಡೆದುಕೊಂಡರು.

ಲೀಗ್ ಪಂದ್ಯಾವಳಿಯ ಫಲಿತಾಂಶ:: ಲೀಗ್ ಹಂತದ ಮೊದಲ ಪಂದ್ಯವು ಮಾಸ್ಟರ್ಸ್ ಎಫ್.ಸಿ ಹಾಗೂ ರಾಕ್ ಸ್ಟಾರ್ ತಂಡಗಳ ನಡುವೆ ನಡೆಯಿತು.
ಮಾಸ್ಟರ್ಸ್ ಎಫ್.ಸಿ ತಂಡವು 3-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.ಮಾಸ್ಟರ್ಸ್ ಎಫ್‌.ಸಿ ತಂಡದ ಸವಾದ್ ಉಸ್ಮಾನ್ ಹಿರೋ ಆಫ್.ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡರು.  ಮಾಸ್ಟರ್ಸ್ ಎಫ್‌.ಸಿ ತಂಡದ ಪರವಾಗಿ ಸವಾದ್ ಎರಡು ಮತ್ತು ಎ.ಆರ್ ಕುಟ್ಟಪ್ಪ ಒಂದು ಗೋಲು ಬಾರಿಸಿದರು‌‌.ರಾಕ್ ಸ್ಟಾರ್ ತಂಡದ ಪರವಾಗಿ ಸುರ್ಜಿತ್ ಹಾಗೂ ಎ.ಎಸ್ ಮುಸ್ತಫಾ ತಲಾ ಒಂದು ಗೋಲುಗಳಿಸಿದರು. ಎರಡನೇ ಪಂದ್ಯವು ಮೀಡಿಯಾ ಯುನೈಟೆಡ್ ಹಾಗೂ ಫೀನಿಕ್ಸ್ ಹಂಟರ್ ತಂಡಗಳ ನಡೆಯಿತು.ಎರಡು ತಂಡಗಳ 1-1 ಗೋಲುಗಳಿಸುವುದರ ಮೂಲಕ ಸಮಬಲ ಸಾಧಿಸಿತು.
ಮೀಡಿಯಾ ಯುನೈಟೆಡ್ ತಂಡದ ಪರವಾಗಿ ತಂಡದ ನಾಯಕ ಗೋಪಾಲ್ ಸೋಮಯ್ಯ, ಫೀನಿಕ್ಸ್ ತಂಡದ ಪರವಾಗಿ ಹನೀಫ್ ಗೋಲು ಬಾರಿಸಿದರು.
ಹಿರೋ ಆಫ್.ದಿ ಪ್ರಶಸ್ತಿಯನ್ನು‌ ಗೋಪಾಲ್ ಸೋಮಯ್ಯ ‌ಪಡೆದುಕೊಂಡರು. ತೃತೀಯ ಪಂದ್ಯದಲ್ಲಿ ಮಾಸ್ಟರ್ಸ್ ಎಫ್.ಸಿ ತಂಡವು ಮೀಡಿಯಾ ಯುನೈಟೆಡ್ ತಂಡವನ್ನು 5-0 ಗೋಲುಗಳ ‌ಅಂತರದಿಂದ ಮಣಿಸಿತು. ಮಾಸ್ಟರ್ಸ್ ತಂಡದ ಪರವಾಗಿ ಎ.ಆರ್ ಕುಟ್ಟಪ್ಪ ಹಾಗೂ ಸವಾದ್ ಉಸ್ಮಾನ್ ತಲಾ ಎರಡು ಗೋಲು ಮತ್ತು ಇಸ್ಮಾಯಿಲ್ ಕಂಡಕರೆ ಒಂದು ಗೋಲು ಬಾರಿಸಿದರು. ಮಾಸ್ಟರ್ಸ್ ತಂಡದ ಎ.ಆರ್ ಕುಟ್ಟಪ್ಪ ಹಿರೋ ಆಫ್‌ದಿ‌ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡರು.ನಾಲ್ಕನೇ ಪಂದ್ಯದಲ್ಲಿ ರಾಕ್ ಸ್ಟಾರ್ ತಂಡವು ಫೀನಿಕ್ಸ್ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸಿತು.ರಾಕ್ ಸ್ಟಾರ್ ತಂಡದ ಪರವಾಗಿ ಎ.ಎಸ್ ಮುಸ್ತಫಾ ಹಾಗೂ ಸುರ್ಜಿರ್ ತಲಾ ಎರಡು ಗೋಲುಗಳಿಸಿದರೆ,ಫೀನಿಕ್ಸ್ ತಂಡದ ಪರವಾಗಿ ದಿವಾಕರ್ ಒಂದು ಗೋಲು ಬಾರಿಸಿದರು. ಎ.ಎಸ್ ಮುಸ್ತಫಾ ಹಿರೋ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡರು. ಐದನೇ ಪಂದ್ಯದಲ್ಲಿ ಮಾಸ್ಟರ್ಸ್ ಎಫ್.ಸಿ ತಂಡವು ಫೀನಿಕ್ಸ್ ‌ತಂಡವನ್ನು ಇಸ್ಮಾಯಿಲ್ ಕಂಡಕರೆ ಅವರ ಏಕೈಕ ಗೋಲುಗಳ ನೆರವನಿಂದ ಗೆಲುವು ಪಡೆದುಕೊಂಡಿತ್ತು.
ಇಸ್ಮಾಯಿಲ್ ಕಂಡಕರೆ ಹಿರೋ ಆಫ್.ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಆರನೇ ಪಂದ್ಯದಲ್ಲಿ ರಾಕ್ ಸ್ಟಾರ್ ತಂಡವು 3-2 ಗೋಲುಗಳ ಅಂತರದಿಂದ ಮೀಡಿಯಾ ಯುನೈಟೆಡ್ ತಂಡದ ವಿರುದ್ಧ ಗೆದ್ದಿತು. ರಾಕ್ ಸ್ಟಾರ್ ತಂಡದ ಪರವಾಗಿ ಎ‌ಎಸ್ ಮುಸ್ತಫಾ, ಸುರ್ಜಿತ್ ಹಾಗೂ ಅಂತೋಣಿ ತಲಾ ಒಂದು ಗೋಲುಬಾರಿಸಿದರು. ಮೀಡಿಯಾ ಯುನೈಟೆಡ್ ತಂಡದ ಪರವಾಗಿ ಗೋಪಾಲ್ ಸೋಮಯ್ಯ ಹಾಗೂ ರೆಜಿತ್ ಕುಮಾರ್ ಗುಹ್ಯ ಗೋಲುಬಾರಿಸಿದರು.
ರಾಕ್ ಸ್ಟಾರ್ ತಂಡದ ನಾಯಕ ಹಿರೋ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.

ಉದ್ಘಾಟನಾ ಸಮಾರಂಭ :: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಮೊದಲ ಬಾರಿಗೆ ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಚೆಟ್ಟಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ, ಪತ್ರಕರ್ತರು ಇಡೀ ಸಮಾಜವನ್ನು ತಿದ್ದಿ, ಸಮಾಜದ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿದ್ದಾರೆ. ವಿಶೇಷವಾಗಿ ಕೊಡಗಿನ ಪತ್ರಕರ್ತರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಇಡೀ ಕೊಡಗಿನ ಚಿತ್ರಣವನ್ನು ಸರ್ಕಾರದ ಮುಂದಿಟ್ಟು,ಪರಿಹಾರ ಒದಗಿಸಲು‌ ಪ್ರಮುಖ ಕಾರಣ ಜಿಲ್ಲೆಯ ಪತ್ರಕರ್ತರು. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರೆಲ್ಲರೂ ಒಂದುಗೂಡಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ. ಫುಟ್ಬಾಲ್ ಪಂದ್ಯಾವಳಿಯನ್ನು ಫುಟ್ಬಾಲ್ ತವರೂರು ಚೆಟ್ಟಳ್ಳಿಯಲ್ಲಿ ಆಯೋಜಿಸಿರುವುದು ಮತ್ತಷ್ಟು ಖುಷಿಕೊಟ್ಟಿದೆ ಎಂದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಿ‌.ಇ ತೀರ್ಥಕುಮಾರ್ ಮಾತನಾಡಿ, ಪತ್ರಕರ್ತರೆಲ್ಲರೂ ಒಂದುಕಡೆ ಸೇರಿ ಫುಟ್ಬಾಲ್ ಪಂದ್ಯಾವಳಿ ಉತ್ತಮ ವೇದಿಕೆಯಾಗಿದೆ. ಪ್ರತಿನಿತ್ಯ ಸುದ್ದಿಯ ಒತ್ತಡದಲ್ಲಿ ಜೀವನ ನಡೆಸುತ್ತಿರುವ ಪತ್ರಕರ್ತರಿಗೆ ಜಿಲ್ಲಾಮಟ್ಟದಲ್ಲಿ ಮತ್ತಷ್ಟು ಕ್ರೀಡಾಕೂಟಗಳು ಆಯೋಜನೆಗೊಳ್ಳಲಿ ಎಂದು ಅಭಿಪ್ರಾಯಪಟ್ಟರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಬೊಳ್ಳಜಿರ ಬಿ.ಅಯ್ಯಪ್ಪ ವಹಿಸಿದ್ದರು. ವೇದಿಕೆಯಲ್ಲಿ ಚೆಟ್ಟಳ್ಳಿ ಪ್ರೌಢಶಾಲಾ ಆಡಳಿತ ಮಂಡಳಿಯ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷೆ ಬಿ.ಆರ್ ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಪ್ರ.ಕಾರ್ಯದರ್ಶಿ ಎಂ.ಕೆ ಆದರ್ಶ್, ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿ ಸಂಚಾಲಕ ವಿನೋದ್ ಕೆ.ಎಂ, ಕುಶಾಲನಗರ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಇದ್ದರು. ಕಾರ್ಯಕ್ರಮವನ್ನು ಟಿ.ಆರ್ ಪ್ರಭುದೇವ್ ನಿರೂಪಿಸಿದರು. ಕೊಡಗು ಪ್ರೆಸ್ ಕ್ಲಬ್ ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜಾ ಸ್ವಾಗತಿಸಿ,ಸಂಘಟನಾ ಕಾರ್ಯದರ್ಶಿ ಶಿವರಾಜ್ ವಂದಿಸಿದರು. ಕ್ಲಬ್ ಸದಸ್ಯ ಗಣೇಶ್ ಕುಡೆಕಲ್ ಪ್ರಾರ್ಥನೆ ನೆರವೇರಿಸಿದರು.

ಸಮಾರೋಪ ಸಮಾರಂಭ :: ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ‌ ಮಾತನಾಡಿದ ಕೊಡಗು ಜಿಲ್ಲಾ ಎಸ್ಎನ್.ಡಿಪಿ ಅಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ‌ ಲೋಕೇಶ್, ಕೊಡಗಿನ ಪತ್ರಕರ್ತರು,ಇತರೆ ಜಿಲ್ಲೆಗಳ ಪತ್ರಕರ್ತರಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಪತ್ರಕರ್ತರ ಒಂದು ಕುಟುಂಬದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ವಿಷಯ.ಅದಲ್ಲದೇ ಕೊಡಗು ಜಿಲ್ಲೆಯ ಪತ್ರಕರ್ತರು ಸೇರಿ ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರ ಸಂಘವನ್ನು ಸ್ಥಾಪಿಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಜಿಲ್ಲೆಯ ಪತ್ರಕರ್ತರು ಕ್ರಿಕೆಟ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಹಲವು ಬಾರಿ ಗಮನಿಸಿದ್ದೇನೆ. ಇದೀಗ ಮೊದಲ ಬಾರಿಗೆ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಒಳ್ಳೆಯ ವಿಷಯ. ಸದಾ ಸುದ್ದಿಯ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಆರೋಗ್ಯಕೆ ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ವಿ.ಕೆ ಲೋಕೇಶ್ ಅಭಿಪ್ರಾಯಪಟ್ಟರು‌. ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸಿರ್ ಮೂರ್ನಾಡು ಮಾತನಾಡಿ,ಕೊಡಗು ಜಿಲ್ಲೆಯ ಪತ್ರಕರ್ತರಲ್ಲಿ‌ ಕೂಡ ಉತ್ತಮ ಕ್ರೀಡಾಪಟುಗಳು ಇದ್ದಾರೆ. ರಾಜ್ಯದಲ್ಲಿ ಇತರೆ ಜಿಲ್ಲೆಯ ಪತ್ರಕರ್ತರಿಗೆ ಹೋಲಿಸಿದರೆ, ಕೊಡಗು ಜಿಲ್ಲೆಯ ಪತ್ರಕರ್ತರು ಹೆಚ್ಚು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷೆ ಬಿ‌‌‌‌.ಆರ್ ಸವಿತಾ ರೈ ಮಾತನಾಡಿ,ನಾವೆಲ್ಲರೂ ಕ್ರಿಕೆಟ್ ಪಂದ್ಯವನ್ನು ಆಡಿದ್ದೇವೆ‌.ಇದೇ ಮೊದಲ ಬಾರಿಗೆ ಫುಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ವಿಶೇಷ ಅನುಭವಕೊಟ್ಟಿದೆ. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ನೇತೃತ್ವದಲ್ಲಿ,ಇಸ್ಮಾಯಿಲ್ ಕಂಡಕರೆ ಮತ್ತು ವಿನೋದ್ ಕೆ.ಎಂ ಅವರ ಸಂಚಾಲಕತ್ವದಲ್ಲಿ ಫುಟ್ಬಾಲ್ ಪಂದ್ಯಾವಳಿಯು ಅಚ್ಚುಕಟ್ಟಾಗಿ ಆಯೋಜಿಸಿರುವುದು ಶ್ಲಾಘನೀಯ ವಿಷಯ ಎಂದು ಅಭಿಪ್ರಾಯಪಟ್ಟರು. ವಿರಾಜಪೇಟೆ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಕೇರಳ ರಾಜ್ಯದಲ್ಲಿ ಪತ್ರಕರ್ತರಿಗೆ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿದ್ದು ಗಮನಿಸಿದ್ದೇನೆ.ಇದೀಗ ಕರ್ನಾಟಕದಲ್ಲಿ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಪತ್ರಕರ್ತರಿಗೆ ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿರುವುದು ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟರು. ಫುಟ್ಬಾಲ್ ಮೈದನಾವನ್ನು ಅಚ್ಚುಕಟ್ಟಾಗಿ ಸಜ್ಜುಗೊಳಿಸಲು ಕೈ ಜೋಡಿಸಿದ ಗಾಂಧಿ ಯುವಕ ಸಂಘದ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ರೆಜಿತ್ ಕುಮಾರ್ ಗುಹ್ಯ ಧನ್ಯವಾದ ಸಲ್ಲಿಸಿದರು‌. ಸಮಾರೋಪ‌ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೊಳ್ಳಜಿರ ಬಿ.ಅಯ್ಯಪ್ಪ, ದಾನಿಗಳು ಕೈ ಜೋಡಿಸಿದರೆ ಮಾತ್ರ ಕ್ರೀಡಾಕೂಟಗಳು ಮತ್ತು ಕಾರ್ಯಕ್ರಮಗಳು ಆಯೋಜಿಸಲು ಸಾಧ್ಯ.ದಾನಿಗಳು ಸಹಕಾರ ಮುಖ್ಯವಾಗಿ ಬೇಕಾಗಿದೆ ಎಂದು ಹೇಳಿದರು.ಫುಟ್ಬಾಲ್ ಪಂದ್ಯಾವಳಿ ಸಂಚಾಲಕ ಇಸ್ಮಾಯಿಲ್ ಕಂಡಕರೆ ಮಾತಾನಡಿದರು.
ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಇದ್ದರು. ಕಾರ್ಯಕ್ರಮವನ್ನು ಟಿ.ಆರ್.ಪ್ರಭುದೇವ್ ನಿರೂಪಿಸಿದರು.ಕ್ಲಬ್ ಸದಸ್ಯ ಚಂದನ್ ನಂದರಬೆಟ್ಟು ಸ್ವಾಗತಿಸಿ, ಕ್ಲಬ್ ಸಂಘಟನಾ ಕಾರ್ಯದರ್ಶಿ ಶಿವರಾಜ್ ವಂದಿಸಿದರು. ಕ್ಲಬ್ ಸದಸ್ಯ ಗಣೇಶ್ ಕುಡೆಕಲ್ ಪ್ರಾರ್ಥನೆ ನೆರವೇರಿಸಿದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ

ಕರ್ಕಾಳ ಮೇ 9 NEWS DESK : ರಾಷ್ಟ್ರೀಯ ರಕ್ಷಣಾ ಪಡೆಗೆ ಸೇರಬಯಸುವವರಿಗೆ ಕೇಂದ್ರ ಲೋಕಸೇವಾ ಆಯೋಗದವರು ನಡೆಸುವ 2026ರ…

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026

*ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*

ಮೇ 9, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*

ಮೇ 9, 2026

*ಕೊಡಗಿನಲ್ಲಿ ಮುಂಗಾರು ಮುಂಜಾಗ್ರತೆ : ಪೊಲೀಸ್ ಇಲಾಖೆಯಿಂದ ವಿಶೇಷ ಸಭೆ*

ಮೇ 8, 2026

*ಭಾಗಮಂಡಲ : ಮೇ 11 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 8, 2026

*ಮೇ 10 ರಂದು ಮೂರ್ನಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಮೇ 8, 2026

*ಜಂಬೂರಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ : ಮಕ್ಕಳ ಮನಸ್ಸಿಗೆ ಮೌಲ್ಯಗಳ ಸ್ಪರ್ಶ ನೀಡಲು ಕರೆ*

ಮೇ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.