ಮಡಿಕೇರಿ ನ.4 NEWS DESK : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪಿ.ಕೆ.ವೆಂಕಟೇಶ್ ಪ್ರಸನ್ನ ಉದ್ಘಾಟಿಸಿದರು. ಹಿರಿಯ ಕವಿಗಳಾದ ಮೂಕಳೆರ ಟೈನಿ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಕಾನಡ್ಕ ಡೀನ ದೇವಯ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು. ಕವಿಗೋಷ್ಠಿಯಲ್ಲಿ 26 ಕವಿಗಳು ಭಾಗವಹಿಸಿದ್ದು, ಕನ್ನಡ ನಾಡು -ನುಡಿ ಸಂಸ್ಕೃತಿ ಯ ಬಗ್ಗೆ,ಕವನಗಳನ್ನು ವಾಚಿಸಿದರು.ಯಶಿಕ ದೇವಯ್ಯ ಕಾನಡ್ಕ ಪ್ರಾರ್ಥನಾ ನೃತ್ಯ ಮಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ.ವಿದ್ಯಾರ್ಥಿನಿಯಾರಾದ ವೃಂದ ನಿರೂಪಣೆ ಮಾಡಿದರು. ಶ್ವೇತಾ ಅತಿಥಿಗಳನ್ನು ಸ್ವಾಗತಿಸಿದರು. ಕವಿಗೋಷ್ಠಿಯಲ್ಲಿ ಕವಿಗಳಿಗೆ ಗೌರವಪೂರ್ವಕವಾಗಿ ಕನ್ನಡ ರಾಜ್ಯೋತ್ಸವದ ಶಾಲನ್ನು ಹಾಕಿ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಹಾಗೂ ಪುಸ್ತಕವನ್ನು ನೀಡಿ ಗೌರವಿಸಲಾಯಿತು.