ಮಡಿಕೇರಿ ನ.14 NEWS DESK : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹತ್ತು-ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಸದುಪಯೋಗವಾಗಲಿ ಎಂಬ ಆಶಾಭಾವನೆಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮುದಾಯ ವಿಭಾಗದಿಂದ ರಾಜ್ಯದ 507 ಶಾಲೆಗಳಿಗೆ 2.74 ಕೋಟಿ ವೆಚ್ಚದಲ್ಲಿ 4044 ಜೊತೆ ಡೆಸ್ಕ್ ಬೆಂಚು ವಿತರಣೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡಗು ಜಿಲ್ಲೆಯ 98 ಸರಕಾರಿ ಶಾಲೆಗಳಿಗೆ ರೂ.72.25ಲಕ್ಷ ಮೌಲ್ಯದ 850 ಜೊತೆ ಡೆಸ್ಕ್ ಬೆಂಚು ವಿತರಣೆ ಮಾಡಲು ಸಿದ್ದತೆಯಾಗಿದೆ. ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್.ಅನಿಲ್ ಕುಮಾರ್ ಮಾತನಾಡಿ ಪ್ರಸಕ್ತ ವರ್ಷ 1030 ಜ್ಷಾನದೀಪ ಅಥಿತಿ ಶಿಕ್ಷಕರನ್ನು ಸರಕಾರಿ ಶಾಲೆಗಳಲ್ಲಿ ನೇಮಿಸಲಾಗಿದೆ. ಕಳೆದ ವರ್ಷ 45 ಸಾವಿರ, ಪ್ರಸಕ್ತ ವರ್ಷ 65 ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಗಿದೆ ಎಂದು ತಿಳಿಸಿದರು. ಹೇಮಾವತಿ ವಿ.ಹೆಗ್ಗಡೆ ದ.ಕ ಜಿ.ಪಂ ಸಿಇಓ ಕೆ.ಆನಂದ ಉಪಸ್ಥಿತರಿದ್ದರು.