ಮಡಿಕೇರಿ ನ.14 NEWS DESK : ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೇ ಮಾತ್ರ ಏಡ್ಸ್ ತಡೆಗಟ್ಟಲು ಸಾಧ್ಯ ಎಂದು ಡಾ. ಎಂ.ಬಿ.ಕಾವೇರಿಯಪ್ಪ ಅಭಿಪ್ರಾಯಪಟ್ಟರು. ಗೋಣಿಕೊಪ್ಪಲು ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಕೊಡಗು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಗೋಣಿಕೊಪ್ಪಲು ಕಾವೇರಿ ಕಾಲೇಜು ರೆಡ್ ರಿಬ್ಬನ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಗೋಣಿಕೊಪ್ಪಲಿನಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಚ್.ಐ.ವಿ/ ಏಡ್ಸ್ ಎಂದರೇನು, ಅದು ಹೇಗೆ ಬರುತ್ತದೆ ಅದನ್ನು ತಡೆಗಟ್ಟಲು ಏನು ಮಾಡಬೇಕು ಎಂದು ಜನರಿಗೆ ತಿಳಿಸಬೇಕು ಇದರಿಂದ ಏಡ್ಸ್ ತಡೆಗಟ್ಟಲು ಸಾಧ್ಯವಾಗುತ್ತದೆ. ಏಡ್ಸ್ ತಡೆಗಟ್ಟಲು ಜಾಗೃತಿ ಒಂದೇ ಉತ್ತಮ ಮಾರ್ಗ ಎಂದು ತಿಳಿಸಿದರು. ಗೋಣಿಕೊಪ್ಪಲು ಸಮುದಾಯದ ಅರೋಗ್ಯ ಕೇಂದ್ರ ಐ.ಟಿ.ಟಿ.ಸಿ ಆಪ್ತ ಸಮಾಲೋಚಕ ಚಂದ್ರಶೇಖರ್ ಮಾತನಾಡಿ, ಹೆಚ್.ಐ.ವಿ ಏಡ್ಸ್ ತಡೆಗಟ್ಟಲು ಸಮುದಾಯ ಆರೋಗ್ಯ ಕೇಂದ್ರ ಭೇಟಿ ನೀಡಿ ಮಾಹಿತಿ ನೀಡಬಹುದು. ಇದನ್ನು ನಾವು ಗೌಪ್ಯವಾಗಿ ಇಡಲಾಗುವುದು ಇಲ್ಲವೇ ಸಹಾಯವಾಣಿ 1097 ಗೆ ದೂರವಾಣಿ ಮಾಡಿ ತಿಳಿಸಬಹುದು. ದಯವಿಟ್ಟು ಕೊಡಗು ಜಿಲ್ಲೆ ಏಡ್ಸ್ ಮುಕ್ತ ಜಿಲ್ಲೆಯಾಗಿಸಲು ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡರು. ಗೋಣಿಕೊಪ್ಪಲು, ಕಾವೇರಿ ಪದವಿ ಕಾಲೇಜು ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಎಂ.ಎನ್.ವನಿತ್ ಕುಮಾರ್ ಮತ್ತು ಎನ್.ಪಿ.ರೀತಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ರಾನ್ಸಿ, ಸಚಿನ್, ವಿಷ್ಣು, ಅರ್ಜುನ್, ಸಮೃದ್, ನಂದನ್, ಅಮುಲ್, ವೈಷ್ಣವ್, ಅಪ್ಸಲ್, ಧನ್ಯ, ದರ್ಶಿನಿ, ಮಂಜುಳಾ, ಕವಿತಾ, ಬೃಂದವನ್, ವಿಷ್ಮ, ದೀಕ್ಷೀತಾ, ತನುಷಾ, ದೀಕ್ಷಾ ಬೋಜಮ್ಮ, ಗೀಷ್ಮ ಉತ್ತಪ್ಪ, ಕೀರ್ತಿ ಕಾವೇರಮ್ಮ ಮುಂತಾದವರು ಕಾಲೇಜು ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಜಾಗೃತಿ ನೃತ್ಯ ಮತ್ತು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಗೋಣಿಕೊಪ್ಪಲು ಪೋಲಿಸ್ ಠಾಣೆಯ ಠಾಣಾಧಿಕಾರಿ ಪ್ರಸನ್ನ ಕುಮಾರ್, ಪೋಲಿಸ್ ಸಿಬ್ಬಂದಿಗಳು, ಅಧ್ಯಾಪಕರು, ಸಾರ್ವಜನಿಕರು ಉಪಸ್ಥಿತರಿದ್ದರು.