ಮಡಿಕೇರಿ ನ.19 NEWS DESK : ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಐ ಕ್ಯೂ ಎಸಿ ವತಿಯಿಂದ ಡಿಜಿಟಲ್ ಲೈಬ್ರರಿ ಪೋರ್ಟಲ್ ಉದ್ಘಾಟಿಸಲಾಯಿತು. ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಡಿಜಿಟಲ್ ಲೈಬ್ರರಿ ಪೋರ್ಟಲ್ ಅನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಸಮಯವನ್ನು ಹೆಚ್ಚಾಗಿ ಕಳೆಯುತ್ತಿದ್ದರು. ಆದರೆ ಪ್ರಸ್ತುತದಿನಗಳಲ್ಲಿ ಗ್ರಂಥಾಲಯಕ್ಕೆ ಬಂದು ಓದುವ ಹಾವ್ಯಸ ಕಡಿಮೆಯಾಗಿದ್ದು, ವಿದ್ಯಾರ್ಥಿಗಳು ಡಿಜಿಟಲ್ ಲೈಬ್ರರಿ ಪೋರ್ಟಲ್ ನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಹೆಚ್ಚು ಸಮಯವನ್ನು ಕಳೆದಷ್ಟು ಜೀವನದಲ್ಲಿ ಜ್ಞಾನದ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಲೈಬ್ರೆರಿಯನ್ ಪ್ರೊಫೆಸರ್ ವಿಜಯಲತಾ ಡಿಜಿಟಲ್ ಲೈಬ್ರರಿಯ ಮಹತ್ವವನ್ನು ತಿಳಿಸಿದರು. E Edwise Learning Portal ಮಾಲೀಕ ಧೀರಜ್ ಮಾತನಾಡಿ, ಡಿಜಿಟಲ್ ಲೈಬ್ರರಿ ಪೋರ್ಟಲ್‌ನಲ್ಲಿ ಪಠ್ಯಪುಸ್ತಕ, ಸ್ಮಧಾತ್ಮಕ ಪರೀಕ್ಷೆ ಪುಸ್ತಕಗಳು, ಪ್ರಶ್ನೆ ಪತ್ರಿಕೆಗಳನ್ನು ಅನುಕೂಲಕ್ಕೆ ತಕ್ಕಂತೆ ಯಾವುದೇ ಸಮಯದಲ್ಲಿ ಪಡೆಯಬಹುದಾಗಿ ಎಂದು ತಿಳಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಡಿಜಿಟಲ್ ಪೋರ್ಟಲ್ ವ್ಯವಸ್ಥೆ ಕಲ್ಪಿಸಲು ಧನಸಹಾಯವನ್ನು ಒದಗಿಸಲಾಗಿತ್ತು. ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ದೃಷ್ಟಿಯಿಂದ ಇನ್ನಷ್ಟು ಸಹಕಾರ ನೀಡಲಾಗುವುದಾಗಿ ಸಮಿತಿಯು ಭರವಸೆ ನೀಡಿತು. ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕರಾದ ಯಶೋಧ ಪೇರಿಯಂಡ, ಐಚಂಡ ರಶ್ಮಿ ಮೇದಪ್ಪ, ಮಾಗುಲು ಲೋಹಿತ್, ಚರಣ್ ಬಲ್ಯದ, ಪ್ರಶಾಂತ್ ಮುತ್ತಣ್ಣ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶೈಲಶ್ರೀ ನಿರೂಪಿಸಿದರು. ಪೂರ್ಣಿಮಾ ವಂದಿಸಿದರು.