ಮಡಿಕೇರಿ ನ.19 NEWS DESK : ವಿ.ಬಾಡಗ ಹೈ ಪ್ಲೆಯರ್ಸ್ ವತಿಯಿಂದ ಡಿ.4 ರಿಂದ 8ರವೆಗೆ ಮೂರನೇ ವರ್ಷದ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿ ಹೈ ಪ್ಲೆಯರ್ಸ್ ಕಪ್-2024 ನಡೆಯಲಿದೆ ಎಂದು ಹೈ ಪ್ಲೆಯರ್ಸ್‍ನ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿ.ಬಾಡಗ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಆಸಕ್ತ ತಂಡಗಳು ನ.22ರ ಒಳಗೆ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಿದರು. ಕಳೆದ ಎರಡು ವರ್ಷದಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೇರಳೆನಾಡು ಮತ್ತು ಕುತ್ತುನಾಡಿನಲ್ಲಿ ಐನ್‍ಮನೆ ಹೊಂದಿರುವ ಕೊಡವ ಕುಟುಂಬಗಳಿಗೆ ಭಾಗವಹಿಸಲು ಅವಕಾಶಕಲ್ಪಿಸಿದ್ದು, ಈ ಬಾರಿ ಬಿಟ್ಟಂಗಾಲ-ಬಿ.ಶೆಟ್ಟಿಗೇರಿ-ಹಾತೂರು ಗ್ರಾ.ಪಂ ವ್ಯಾಪ್ತಿಯ ಐನ್‍ಮನೆ ಹೊಂದಿರುವ ಕೊಡವ ಕುಟುಂಬಗಳಿಗಳಿಗೆ ಪಂದ್ಯಾವಳಿ ನಡೆಯಲಿದ್ದು, ಪ್ರತಿ ಕುಟುಂಬದ ತಂಡಗಳಿಗೆ 4 ಕೊಡವ ಅತಿಥಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ರಂಜು ಪೂಣಚ್ಚ ಮಾಹಿತಿ ನೀಡಿದರು. ಕಾರ್ಯದರ್ಶಿ ಪ್ರವೀಣ್ ತಿಮ್ಮಯ್ಯ ಮಾತನಾಡಿ, ಈ ಪಂದ್ಯಾವಳಿಗೆ ಒಟ್ಟು 30 ತಂಡಗಳು ನೊಂದಾಯಿಸಿಕೊಳ್ಳುವ ನಿರೀಕ್ಷೆ ಇದ್ದು, ವಿಜೇತ ತಂಡಗಳಿಗೆ ಆಕರ್ಷಕ ಬೆಳ್ಳಿಯ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು, ತಂಡಗಳ ನೊಂದಾಣಿಗಾಗಿ ಕುಪ್ಪಂಡ ದಿಲನ್ -9481883738, ಪೂವಣ್ಣ-9480904999 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಹೈ ಪ್ಲೆಯರ್ಸ್‍ನ ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ, ಕ್ರೀಡಾ ಕಾರ್ಯದರ್ಶಿ ಕುಪ್ಪಂಡ ದಿಲನ್ ಬೋಪಣ್ಣ, ಸಲಹಾ ಸಮಿತಿ ಸದಸ್ಯ ಚೇಮಿರ ಪ್ರಭು ಪೂವಯ್ಯ, ಉಪಾಧ್ಯಕ್ಷ ಕಂಜಿತಂಡ ಪೂವಣ್ಣ ಉಪಸ್ಥಿತರಿದ್ದರು.