

ಮಡಿಕೇರಿ ನ.23 NEWS DESK : ನಗರದ ವ್ಯಾಂಡಮ್ ಎಂಟರ್ಪ್ರೈಸಸ್ ನ 29ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಪ್ರತೀ 2,000 ಖರೀದಿಗೆ ನೀಡಲಾದ ಉಚಿತ ಕೂಪನ್ “ಲಕ್ಕಿ ಡ್ರಾ ಸಮಾರಂಭವು ನ.24 ರಂದು ನಡೆಯಲಿದೆ. ವ್ಯಾಂಡಮ್ ಎಂಟರ್ಪ್ರೈಸಸ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಲಯನ್ಸ್ ಕ್ಲಬ್ ಇಂಟನ್ರ್ಯಾಷನಲ್ ನಿಕಟ ಪೂರ್ವ ಪ್ರಾಂತೀಯ ಅಧ್ಯಕ್ಷ ಲಯನ್ ಪಟ್ರಪಂಡ ಪಿ.ಸೋಮಣ್ಣ (ಎಂಜೆಎಫ್) ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮದೆನಾಡು ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಸಿದ್ದರಾಜು ಪಾಲ್ಗೊಳ್ಳಲಿದ್ದಾರೆ. ಮಕ್ಕಂದೂರು ಪ್ರೌಢಶಾಲಾ ಶಿಕ್ಷಕಿ ಲಯನ್ ಜಿ.ವನಜಾಕ್ಷಿ ದಾಮೋದ್ ಗೌರವ ಉಪಸ್ಥಿತರಿರಲಿದ್ದಾರೆ.











