Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೂರ್ನಾಡಿನಲ್ಲಿ 102ನೇ ವರ್ಷದ ಕೈಲ್ ಪೊಳ್ದ್ ಸಂಭ್ರಮ*
  • *ವಿರಾಜಪೇಟೆ ನಗರ ಕಾಂಗ್ರೆಸ್ ಸಭೆ: ನೂತನ ಪದಾಧಿಕಾರಿಗಳ ಆಯ್ಕೆಗೆ ಒಮ್ಮತದ ನಿರ್ಧಾರ*
  • *ವಿರಾಜಪೇಟೆಯಲ್ಲಿ ಸಂಭ್ರಮದ 18ನೇ ವರ್ಷದ ಓಣಂ ಆಚರಣೆ*
  • *ವಿರಾಜಪೇಟೆ : ಸಂತ ಅನ್ನಮ್ಮ ಚರ್ಚ್‌ನಲ್ಲಿ ಸಂಭ್ರಮದ ಮೇರಿಮಾತೆ ಜಯಂತಿ ಆಚರಣೆ*
  • *ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ತುರ್ತು ಚಿಕಿತ್ಸಾ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ*
  • *ಕುಶಾಲನಗರದಲ್ಲಿ ಮರಿಯಮ್ಮ ಜನ್ಮ ದಿನದ ಸಂಭ್ರಮ; ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಭಕ್ತಿಭಾವದಿಂದ ಆಚರಣೆ*
  • *ಕುಶಾಲನಗರದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ: ನವಸಾಕ್ಷರರಿಗೆ ಸನ್ಮಾನ*
  • *ಲಯನ್ಸ್ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ; ಶಿಕ್ಷಕಿ ವನಜಾಕ್ಷಿ ದಾಮೋದರ್‌ಗೆ ಸನ್ಮಾನ*
  • *ಲಯನ್ಸ್ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ; ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸವಿತಾ ಎಂ.ಜಿ.ಗೆ ಸನ್ಮಾನ*
  • *ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 75ನೇ ವಾರ್ಷಿಕ ಮಹಾಸಭೆ 58.12. ಲಕ್ಷ ನಿವ್ವಳ ಲಾಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ : ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿ : ಎಂ.ಪಿ.ಕೇಶವ ಕಾಮತ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ : ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿ : ಎಂ.ಪಿ.ಕೇಶವ ಕಾಮತ್*

ನವೆಂಬರ್ 25, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ನ.25 NEWS DESK : ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ ಕನ್ನಡ ಭಾಷೆ, ನಾಡು, ನುಡಿ, ಅತಿ ಉತ್ಕೃಷ್ಟವಾದದ್ದು. ಕನ್ನಡ ಸಾಹಿತ್ಯ ಲೋಕದಲ್ಲಿ ದಾಸ ಸಾಹಿತ್ಯ, ವಚನ ಸಾಹಿತ್ಯ, ಶಿಶು ಸಾಹಿತ್ಯ, ಜಾನಪದ ಸಾಹಿತ್ಯ, ಪ್ರೇಮ ಸಾಹಿತ್ಯ, ದಾಂಪತ್ಯ ಸಾಹಿತ್ಯ ಈ ಹಲವಾರು ವಿಭಾಗಗಳಿದ್ದು ಎಲ್ಲವೂ ಅತ್ಯುನ್ನತ ಪರಂಪರೆ ಹೊಂದಿದೆ ಎಂದು ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ನ ಉಪಾಧ್ಯಕ್ಷ ಎಂ.ಬಿ.ನಾಸಿರ್ ಅಹಮದ್ ನುಡಿದರು.  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎ.ಎಲ್.ಜಿ ಕ್ರೆಸೆಂಟ್ ಶಾಲೆ, ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ಹಾಗೂ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ವತಿಯಿಂದ ಮಡಿಕೇರಿಯ ಕ್ರೆಸೆಂಟ್ ಶಾಲಾ ಸಭಾಂಗಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‌‌‌  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಯಬೇಕು, ಕನ್ನಡ ನಾಡು ನುಡಿಯ ವಿಚಾರ ತಿಳಿಯಬೇಕು, ಕನ್ನಡ ಗೀತೆಗಳನ್ನು ಹಾಡುವ ಮೂಲಕ ಅದರ ಅರಿವು ಅವರಿಗೆ ಮೂಡಬೇಕು ಎಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಕ್ರೆಸೆಂಟ್ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ.ಹೆಚ್.ಹನೀಪ್ ಮಾತನಾಡಿ ವಿದ್ಯಾರ್ಥಿಗಳಿಗೆ ಈ ರೀತಿಯ ಒಂದು ಉತ್ತಮವಾದ ಕಾರ್ಯಕ್ರಮದಿಂದ ಕನ್ನಡ ನಾಡು ನುಡಿ ಪರಿಚಯ ಮಾಡಿಕೊಡುತ್ತಿರುವ ಸಾಹಿತ್ಯ ಪರಿಷತ್ತಿಗೆ ಧನ್ಯವಾದ ಅರ್ಪಿಸಿದರು.  ಕಾರ್ಯಕ್ರಮದಲ್ಲಿ ಕ್ರಸೆಂಟ್ ಶಾಲೆಯ ಅಧ್ಯಕ್ಷ  ನಿಝಾಮುದ್ದೀನ್ ಸಿದ್ದೀಖಿ, ಉಪಾದ್ಯಕ್ಷರಾದ ಅನೀಸ್ ಜವಾಹರ್, ನಿರ್ದೇಶಕ ಉಮ್ಮರ್ ಚಡಖಾನ್, ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಎಸ್.ಐ ಮುನೀರ್ ಅಹಮದ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕೋಶಾಧಿಕಾರಿ ಸಂಪತ್ ಕುಮಾರ್, ಸಾಹಿತಿಗಳಾದ ಬೈತಡ್ಕ ಜಾನಕಿ , ಗೌರಮ್ಮ ಮಾದಮ್ಮಯ್ಯ, ಭಾರತಿ ರಮೇಶ್, ಕಟ್ಟರ್ತನ ಲಲಿತ ಅಯ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ರಾಧಾ ಪೊನ್ನಪ್ಪ ಶರೀಫ್ ಶಾಲಾ ಅದ್ಯಾಪಕರುಗಳು ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಕವನ ವಾಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು. 15 ಶಾಲೆಗಳ 30 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮೊದಲ ಸುತ್ತಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಎಂಟು ತಂಡವನ್ನು ಆಯ್ಕೆಗೊಳಿಸಲಾಯಿತು ಹತ್ತು ಸುತ್ತುಗಳ ಸ್ಪರ್ಧೆಯಲ್ಲಿ ಹಾಕತ್ತೂರಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ನಿತ್ಯಶ್ರೀ ಎಂಎಸ್ ಮತ್ತು ಚೇತನ್ ಪಿ ಸಿ ಇವರು ಪ್ರಥಮ ಬಹುಮಾನಗಳಿಸಿದರು. ದ್ವಿತೀಯ ಬಹುಮಾನವನ್ನು ನಾಪೋಕ್ಲುವಿನ ಎಕ್ಸೆಲ್ ಎಜುಕೇಶನ್ ಶಾಲೆಯ ಟಿ.ಆರ್.ಸುಮಂತ್  ಮತ್ತು ದರ್ಶ ದೇಶಮ್ಮ ಪಡೆದುಕೊಂಡರು. ತೃತೀಯ ಬಹುಮಾನವನ್ನು ರಾಫೆಲ್ಸ್ ವಿದ್ಯಾಸಂಸ್ಥೆ ನಾಪೋಕ್ಲು ಶಾಲೆಯ ವಿದ್ಯಾರ್ಥಿಗಳಾದ ಮೆಹರೂಫ್ ಮತ್ತು ಸಲ್ಮಾನ್ ಫಾರಿಸ್ ಪಡೆದುಕೊಂಡರು. ಹಿರಿಯ ಸಾಹಿತಿ ಬಿ.ಎ ಶಂಷುದ್ದೀನ್ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರು ಸ್ಪರ್ಧಿಸಿದ 8 ತಂಡಗಳಿಗೆ ನಾಡಿನ ಪ್ರಸಿದ್ದ ನದಿಗಳಾದ ಶರಾವತಿ, ಗೋದಾವರಿ, ಭದ್ರ, ಕನ್ನಿಕೆ , ಕಾವೇರಿ, ತುಂಗಾ, ಕೃಷ್ಣ , ಭೀಮ ಹೀಗೆ ನದಿಗಳ ಹೆಸರನ್ನು ಇಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು. ನಾಡು ನುಡಿ ಸಾಹಿತ್ಯ ಇತಿಹಾಸ ಗಳಿಗೆ ಸಂಬಂಧಪಟ್ಟ ಪ್ರಶ್ನೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿತ್ತು.  ಕ್ರೆಸೆಂಟ್ ಶಾಲಾ ಅದ್ಯಾಪಕಿ ಸುಲ್ಹತ್ ನಿರೂಪಿಸಿದರು ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್ ಐ ಮುನೀರ್ ಅಹಮದ್ ಸ್ವಾಗತಿಸಿದರು. ಕೋಶಾಧಿಕಾರಿ ಸಂಪತ್ ಕುಮಾರ್ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮೂರ್ನಾಡಿನಲ್ಲಿ 102ನೇ ವರ್ಷದ ಕೈಲ್ ಪೊಳ್ದ್ ಸಂಭ್ರಮ*

ಸೆಪ್ಟೆಂಬರ್ 8, 2026

*ವಿರಾಜಪೇಟೆ ನಗರ ಕಾಂಗ್ರೆಸ್ ಸಭೆ: ನೂತನ ಪದಾಧಿಕಾರಿಗಳ ಆಯ್ಕೆಗೆ ಒಮ್ಮತದ ನಿರ್ಧಾರ*

ಸೆಪ್ಟೆಂಬರ್ 8, 2026

*ವಿರಾಜಪೇಟೆಯಲ್ಲಿ ಸಂಭ್ರಮದ 18ನೇ ವರ್ಷದ ಓಣಂ ಆಚರಣೆ*

ಸೆಪ್ಟೆಂಬರ್ 8, 2026

*ವಿರಾಜಪೇಟೆ ನಗರ ಕಾಂಗ್ರೆಸ್ ಸಭೆ: ನೂತನ ಪದಾಧಿಕಾರಿಗಳ ಆಯ್ಕೆಗೆ ಒಮ್ಮತದ ನಿರ್ಧಾರ*

ಸೆಪ್ಟೆಂಬರ್ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಸೆ.8 NEWS DESK : ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ವಿರಾಜಪೇಟೆ ನಗರ ಕಾಂಗ್ರೆಸ್ ಸಮಿತಿಯ ಪ್ರಮುಖ ಸಭೆಯು…

*ವಿರಾಜಪೇಟೆಯಲ್ಲಿ ಸಂಭ್ರಮದ 18ನೇ ವರ್ಷದ ಓಣಂ ಆಚರಣೆ*

ಸೆಪ್ಟೆಂಬರ್ 8, 2026

*ವಿರಾಜಪೇಟೆ : ಸಂತ ಅನ್ನಮ್ಮ ಚರ್ಚ್‌ನಲ್ಲಿ ಸಂಭ್ರಮದ ಮೇರಿಮಾತೆ ಜಯಂತಿ ಆಚರಣೆ*

ಸೆಪ್ಟೆಂಬರ್ 8, 2026

*ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ತುರ್ತು ಚಿಕಿತ್ಸಾ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ*

ಸೆಪ್ಟೆಂಬರ್ 8, 2026

*ಕುಶಾಲನಗರದಲ್ಲಿ ಮರಿಯಮ್ಮ ಜನ್ಮ ದಿನದ ಸಂಭ್ರಮ; ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಭಕ್ತಿಭಾವದಿಂದ ಆಚರಣೆ*

ಸೆಪ್ಟೆಂಬರ್ 8, 2026

*ಕುಶಾಲನಗರದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ: ನವಸಾಕ್ಷರರಿಗೆ ಸನ್ಮಾನ*

ಸೆಪ್ಟೆಂಬರ್ 8, 2026

*ಲಯನ್ಸ್ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ; ಶಿಕ್ಷಕಿ ವನಜಾಕ್ಷಿ ದಾಮೋದರ್‌ಗೆ ಸನ್ಮಾನ*

ಸೆಪ್ಟೆಂಬರ್ 8, 2026

*ಲಯನ್ಸ್ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ; ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸವಿತಾ ಎಂ.ಜಿ.ಗೆ ಸನ್ಮಾನ*

ಸೆಪ್ಟೆಂಬರ್ 8, 2026

*ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 75ನೇ ವಾರ್ಷಿಕ ಮಹಾಸಭೆ 58.12. ಲಕ್ಷ ನಿವ್ವಳ ಲಾಭ*

ಸೆಪ್ಟೆಂಬರ್ 8, 2026

*ವಲಯ ಮಟ್ಟದ ಕ್ರೀಡಾಕೂಟ: ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆ ತಂಡ ವಿಜೇತ*

ಸೆಪ್ಟೆಂಬರ್ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.