ವಿರಾಜಪೇಟೆ ನ.25 NEWS DESK : ಮನಸ್ಸು ಮತ್ತು ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭವಾಗುತ್ತದೆ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಕೆ.ಬಸವರಾಜು ಅಭಿಪ್ರಾಯಪಟ್ಟರು. ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಆಂತರಿಕ ಭರವಸೆ ಕೋಶದ ಸಹಯೋಗದಲ್ಲಿ ಭ್ರಷ್ಟಾಚಾರ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದೇವೆ. ತಮ್ಮ ತಮ್ಮ ಮನೆಗಳಲ್ಲಿ ಮಕ್ಕಳು ಅಳುವಾಗ ಅಥವಾ ಏನಾದರೂ ಕೆಲಸ ಮಾಡಿಸಿಕೊಳ್ಳಲು ಸಿಹಿ ಆಮಿಷ ಒಡ್ಡಿ ನಮಗೆ ಬೇಕಾದಂತೆ ಮಾಡಿಸಿಕೊಳ್ಳಲುತ್ತೇವೆ. ಮಕ್ಕಳು ಅಪ್ಪ ಅಮ್ಮನಿಂದ ಲಂಚ ಪಡೆದರೆ, ಪೋಷಕರು ಮಕ್ಕಳಿಗೆ ಲಂಚ ಕೊಡುತ್ತ ಮನೆಯಿಂದಲೇ ಭ್ರಷ್ಟಾಚಾರ ನಾಂದಿ ಹಾಡುತ್ತೇವೆ. ತನ್ನ ಸ್ವಾರ್ಥ ಸಾಧನೆಗಾಗಿ ಹಣ ಕೊಟ್ಟು ನಮ್ಮ ಕೆಲಸ ಮಾಡಿಸಿಕೊಳ್ಳಲು ಮುಂದಾಗುತ್ತೇವೆ. ಲಂಚ ಕೊಡಲು ನಾವೇ ತಯಾರಿ ಇರುವಾಗ ಲಂಚ ಪಡೆಯುವರು ನಮ್ಮಗಿಂತ ಮುಂಚೂಣಿಯಲ್ಲಿ ಹಣ ಪಡೆಯಲು ತಯಾರಿ ಇರುತ್ತಾರೆ. ಇದರಿಂದ ಭ್ರಷ್ಟಾಚಾರ ಸಮಾಜದಲ್ಲಿ ಆಳವಾಗಿ ಬೇರೂರಿದೆ ಎಂದರು. ಲಂಚ ಕೊಟ್ಟು ಕೆಲಸ ತೆಗೆದುಕೊಂಡರೇ ಲಂಚ ಪಡೆದೆ ಸಾಲ ತೀರಿಸಬೇಕಾಗುತ್ತದೆ. ಅವಿಧ್ಯಾವಂತರಿಗಿಂತ ವಿಧ್ಯಾವಂತರೇ ಹೆಚ್ಚು ಭ್ರಷ್ಟಾಚಾರಿಗಳಾಗಿದ್ದಾರೆ. ಭ್ರಷ್ಟಾಚಾರ ತಡೆಗಟ್ಟಬೇಕಾದ ನಮ್ಮ ರಾಜಕಾರಣಿಗಳೇ ಭ್ರಷ್ಟರಾದರೇ ನಮ್ಮನ್ನು ರಕ್ಷಿಸುವರು ಯಾರು ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಭ್ರಷ್ಟಾಚಾರಕ್ಕೆ ಒಳಗಾಗಿ ಮತಹಾಕಿದ ನಾವು ಭ್ರಷ್ಟಾಚಾರದ ಬಗ್ಗೆ ಏನು ಪ್ರಶ್ನೆ ಮಾಡಲು ಸಾಧ್ಯ. ಭ್ರಷ್ಟಾಚಾರ ತಡೆಗಟ್ಟಲು ಲೋಕಪಾಲ್ ಮತ್ತು ಲೋಕಯುಕ್ತ ಸಂಸ್ಥೆ ಸ್ಥಾಪಿಸಿ ಅಧಿಕಾರಿಗಳ ಭ್ರಷ್ಟಾಚಾರವನ್ನು ತಡೆಗಟ್ಟಲು ಪ್ರಯತ್ನ ನಡೆಯುತ್ತಿದೆ. ಆದರೆ ನಮಗೆ ನಾವೇ ಮಾಡಿಕೊಳ್ಳುವ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಿಲ್ಲ. ಅದ್ದರಿಂದ ಯುವಜನರಾದ ನಾವು ಭ್ರಷ್ಟಾಚಾರದ ಬಗ್ಗೆ ಜಾಗೃತರಾಗಿ ಇತರರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕ ಡಾ.ನಯನ ತಮ್ಮಯ್ಯ, ವಿದ್ಯಾರ್ಥಿ ಜೀವನದಿಂದಲೇ ಭ್ರಷ್ಟಾಚಾರದ ಬಗ್ಗೆ ಜಾಗೃತರಾಗಿ ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಎಲ್ಲಿ ಭ್ರಷ್ಟಾಚಾರ ನಡೆಯುತ್ತದೆಯೋ ಅದನ್ನು ಅಲ್ಲಿಯೇ ಕಂಡಿಸಬೇಕು. ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಳ್ಳಿ- ಹಳ್ಳಿಗಳಲ್ಲಿ ನಗರಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಭ್ರಷ್ಟಾಚಾರ ತಡೆಗಟ್ಟಲು ಪ್ರಯತ್ನಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಎಂ.ಎನ್.ವನಿತ್ ಕುಮಾರ್ ಮತ್ತು ಎನ್.ಪಿ.ರೀತಾ ಹಾಗೂ ಕಛೇರಿ ಸಿಬ್ಬಂದಿ ಚನ್ನನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿ ತನುಷ ಪ್ರಾರ್ಥನೆ ಮಾಡಿದರು. ಧನ್ಯ ನಿರೂಪಣೆ ನಿರ್ವಹಿಸಿದರು. ಲಕ್ಷ್ಮಿ ಸ್ವಾಗತಿಸಿದರು. ತ್ರೀಷ ವಂದಿಸಿದರು.