ಮಡಿಕೇರಿ NEWS DESK ನ.26 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 34ನೇ ವರ್ಷದ “ಕೊಡವ ನ್ಯಾಷನಲ್ ಡೇ” ಮತ್ತು ಭಾರತದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು 9 ಪ್ರಮುಖ ನಿರ್ಣಯಗಳನ್ನು ಮಂಡಿಸಿದರು. ಭಾರತೀಯ ಸಂವಿಧಾನದಡಿಯಲ್ಲಿ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು. ಅಂತರಾಷ್ಟ್ರೀಯ ಕಾನೂನಿನಡಿ ಕೊಡವರನ್ನು ಸ್ಥಳೀಯ ಕೊಡವ ಬುಡಕಟ್ಟು ಜನರು ಎಂದು ಗುರುತಿಸಬೇಕು. ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ಕೊಡವ ಸಾಂಪ್ರದಾಯಿಕ “ಸಂಸ್ಕಾರ ಗನ್” ಹಕ್ಕಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು. ಕೊಡವ ಭಾಷೆಯನ್ನು ಭಾರತೀಯ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಗುರುತಿಸಬೇಕು. ಕಾವೇರಿ ನದಿಯನ್ನು ಕಾನೂನುಬದ್ಧ ವ್ಯಕ್ತಿಯ ಸ್ಥಾನಮಾನದೊಂದಿಗೆ ಜೀವಂತ ಘಟಕವಾಗಿ ಗುರುತಿಸಬೇಕು. ಕೊಡವರ ಅನುಕೂಲಕ್ಕಾಗಿ ನದಿಯ ನೀರಿನ ಸಂಪನ್ಮೂಲದ ಬಳಕೆಗೆ ಮುಕ್ತ ಅವಕಾಶ ನೀಡಬೇಕು. ಕರಾಳ ಇತಿಹಾಸದ ಕೊಡವರ ನರಮೇಧದ ಸ್ಥಳದಲ್ಲಿ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಿಸಬೇಕು. ಜನಸಂಖ್ಯಾ ಬದಲಾವಣೆಗಳನ್ನು ತಡೆಗಟ್ಟಲು ಮತ್ತು ಕೊಡವರ ಆಸ್ತಿಗಳನ್ನು ರಕ್ಷಿಸಲು ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಯನ್ನು ಅಳವಡಿಸಬೇಕು. ಭಾರತೀಯ ಸಂಸತ್ತು ಮತ್ತು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕು ಮತ್ತು ಪರಕೀಯ ಆಡಳಿತಗಾರರಿಂದ ವಶಪಡಿಸಿಕೊಳ್ಳಲ್ಪಟ್ಟ ಮತ್ತು ಹೊರಗಿನವರಿಗೆ ಅಡಮಾನವಿಟ್ಟ ಕೊಡವ ಪೂರ್ವಜರ ಭೂಮಿಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಪ್ರಜಾಪ್ರಭುತ್ವ ದೇಶ ಭಾರತದ ಸರ್ವೋಚ್ಚ ದಾಖಲೆಯಾಗಿದೆ. ಇದರ ಆಧಾರದಲ್ಲಿ ಕೊಡವರು ತಮಗೆ ಸೇರಬೇಕಾದ ಹಕ್ಕುಗಳನ್ನು ಮಂಡಿಸುವ ಮೂಲಕ ಸಾಂವಿಧಾನಿಕ ಭದ್ರತೆಯನ್ನು ಪಡೆದುಕೊಳ್ಳಬೇಕು. ಕೊಡವರು ಭಾರತೀಯ ಶ್ರೇಷ್ಠ ಸಂವಿಧಾನದ ಮೂಲಕವಷ್ಟೇ ಹಕ್ಕುಗಳನ್ನು ಪಡೆಯಲು ಸಾಧ್ಯ. ಆದರೆ ಹಕ್ಕುಗಳನ್ನು ಪ್ರತಿಪಾದಿಸುವ ಧೈರ್ಯವನ್ನು ಕೊಡವರು ತೋರಬೇಕು ಎಂದು ಎನ್.ಯು.ನಾಚಪ್ಪ ತಿಳಿಸಿದರು. ಕೊಡವರ ಹಕ್ಕುಗಳ ಕುರಿತು ಹಾದಿ ತಪ್ಪಿಸುವವರ ಮತ್ತು ಪಿತೂರಿ ನಡೆಸುವವರ ಬಗ್ಗೆ ಕೊಡವರು ಜಾಗೃತರಾಗಿರಬೇಕು. ಕೊಡವ ಲ್ಯಾಂಡ್ ಭೂಮಾಫಿಯಾಗಳ ಮೂಲಕ ಪರರ ಪಾಲಾಗುತ್ತಿದ್ದು, ಕೊಡವರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು. ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ಪಟ್ಟಮಾಡ ಲಲಿತಾ, ಅಪ್ಪಚ್ಚಿರ ರೀನಾ, ಕೊಡಂದೇರ ಉತ್ತರೆ, ಚೆಕ್ಕೇರ ಕಾಶಿ, ಚೇಂದಂಡ ಜೆಮ್ಸಿ ಪೊನ್ನಪ್ಪ, ಪೊರಿಮಂಡ ದಿನಮಣಿ, ಮಾಚೆಟ್ಟಿರ ಚೋಟು, ತೀತರಮಾಡ ಪ್ರಭು, ಉದಿಯಂಡ ಸುರೇಶ, ಉದಿಯಂಡ ಚೆಂಗಪ್ಪ, ಡಾ.ನಂದೇಟಿರ ರವಿ ಸುಬಯ್ಯ, ಪೆಮ್ಮುಡಿಯಂಡ ವೇಣು, ಮುಕ್ಕಾಟೀರ ಪ್ರೇಮ್, ಜಮ್ಮಡ ಮೋಹನ್, ಮದ್ರಿರ ಕರುಂಬಯ್ಯ, ಪುಲ್ಲಂಗಡ ನಟೇಶ್, ಬೊಟ್ಟಂಗಡ ಗಿರೀಶ್, ಅಳ್ನಂಡ ಜೈ, ಅರೆಯಡ ಗಿರೀಶ್, ಅರೆಯಡ ಸವಿತ್, ಬೊಟ್ಟಂಗಡ ಸವಿತಾ, ಮಂದಪಂಡ ಮನೋಜ್, ಮಂದಪಂಡ ರಚನ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ದಿನು, ಪಾಂಡಂಡ ನರೇಶ್, ಕುಕ್ಕೇರ ಜಯ ಚಿಣ್ಣಪ್ಪ, ಮನೆಯಪಂಡ ಕಂಠಿ, ಬಿದ್ದಂಡ ಉಷಾ, ನೆಲ್ಲಮಕ್ಕಡ ಶಂಭು, ಕೊಲ್ಲಿರ ಗಯ, ನಂದಿನೆರವಂಡ ಅಪ್ಪಯ್ಯ, ಕೊಂಗೇಟಿರ ಮಾದಯ್ಯ, ಬೊಳ್ಳಿಯಂಡ ವಸಂತ್, ಚೇರಂಡ ಸುಭಾಶ್, ಕಿರಿಯಮಾಡ ಶೆರಿನ್, ಬೊಳ್ಳಚೆಟ್ಟಿರ, ಜಯಂತಿ, ಮಣವಟ್ಟಿರ ಚಿಣ್ಣಪ್ಪ, ಪುದಿಯೊಕ್ಕಡ ಕಾಶಿ, ನಂದಿನೆರವಂಡ ಅಯ್ಯಣ್ಣ, ಮೇದೂರ ಕಂಠಿ, ಕೂಪದಿರ ಸಾಬು, ಮೂಕೊಂಡ ದಿಲೀಪ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎನ್‌ಸಿ ಬೇಡಿಕೆಗಳ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡವ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಿದವು.
Breaking News
- *ಸಿಎನ್‌ಸಿಯಿಂದ “ಕೊಡವ ನ್ಯಾಷನಲ್ ಡೇ” ಮತ್ತು ಸಂವಿಧಾನ ದಿನಾಚರಣೆ : 9 ಪ್ರಮುಖ ನಿರ್ಣಯಗಳ ಮಂಡನೆ*
- *ಮಡಿಕೇರಿ : ನ.27 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ : ಸಿವಿಲ್ ನ್ಯಾಯಾಧೀಶೆ ಶುಭ*
- *ವಿರಾಜಪೇಟೆಯಲ್ಲಿ ನ.27 ರಂದು ಕಾವೇರಿ ಕಾರ್ನಿವಾಲ್ ಫೆಸ್ಟ್*
- *ಚೆಟ್ಟಳ್ಳಿ ಗ್ರಾ.ಪಂ ಉಪಚುನಾವಣೆ : ಅಯ್ಯಂಡ್ರ ಭಾಗೀರಥಿ ಗೆಲುವು*
- *ಸಹಕಾರ ತರಬೇತಿ (ಡಿಸಿಎಂ)ಗೆ ಅರ್ಜಿ ಆಹ್ವಾನ*
- *ತ್ಯಾಗರಾಜ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ : ಪರಿಸರರೊಂದಿಗೆ ಮಕ್ಕಳು ಬೆಳೆಯಬೇಕು : ಗೀತಾ ಗಿರೀಶ್*
- *ಮಡಿಕೇರಿಯಲ್ಲಿ ಸಂವಿಧಾನ ದಿನಾಚರಣೆ : ರಾಷ್ಟ್ರದ ಅಭಿವೃದ್ಧಿಗೆ ಸಂವಿಧಾನ ಪಾತ್ರ ಪ್ರಮುಖ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ*
- *ಪುತ್ತೂರು : ವಿಸಿಇಟಿಯಲ್ಲಿ ಮಂಗಳೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ*
- *ಹೆಬ್ಬೆಟ್ಟಗೇರಿ : ಡಿ.1 ರಂದು ಕೊರಗಜ್ಜ ದೈವದ ಕೋಲೋತ್ಸವ*