ಮಡಿಕೇರಿ NEWS DESK ನ.28 : ಸಾಮಾಜಿಕ ಜಾಲತಾಣಗಳಲ್ಲಿ ದೇಶದ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳಿಗೆ ಅಗೌರವ ತೋರಿದ ಪ್ರಕರಣವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕೆಂದು ಮಡಿಕೇರಿಯ ಉದ್ಯಮಿ ಹಾಗೂ ಭಗವಾನ್ ಸಂಸ್ಥೆಯ ಮಾಲೀಕರಾದ ಬಿ.ಡಿ.ಮಂಜುನಾಥ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾರತೀಯ ಸೇನಾ ಕ್ಷೇತ್ರದ ಮಹಾನ್ ಚೇತನಗಳ ಬಗ್ಗೆ ಸಮಾಜಕ್ಕೆ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಅಪ್ರತಿಮ ವೀರರಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳಿಗೆ ಮಾಡಿದ ಅಪಮಾನ ಇಡೀ ಕೊಡಗಿನ ಜನರಿಗೆ ತೋರಿದ ಅಗೌರವವಾಗಿದೆ. ದೇಶಭಕ್ತಿ ಮತ್ತು ಸೇನಾಶಕ್ತಿಯ ಮೇಲಿನ ಭಾವನೆಗೆ ಚ್ಯುತಿ ತರುವ ಕಿಡಿಗೇಡಿ ಕೃತ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಗೃಹ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ದೇಶದ್ರೋಹ ಸೇರಿದಂತೆ ಸೂಕ್ತ ಪ್ರಕರಣಗಳನ್ನು ದಾಖಲಿಸಿ ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಮತ್ತು ಗಡಿಪಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸೇನೆಗೆ ಸೇರುವ ಯುವ ಸಮೂಹಕ್ಕೆ ಪ್ರೇರಣೆಯಾಗಿರುವ ಇಬ್ಬರು ವೀರಸೇನಾನಿಗಳ ಬಗ್ಗೆ ಮತ್ತಷ್ಟು ಗೌರವ ಹೆಚ್ಚಾಗಬೇಕು. ದೇಶಸೇವೆ ಮಾಡಿದ ವೀರ ಯೋಧರನ್ನು ಹಾಗೂ ಬಲಿದಾನಗೈದ ಹುತಾತ್ಮರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಜಾತಿ, ಧರ್ಮದವರು ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಿಡಿಗೇಡಿಗಳು ಕೆಲವು ಸಂದರ್ಭಗಳಲ್ಲಿ ಗೊಂದಲ ಸೃಷ್ಟಿಸಿ ಅಶಾಂತಿಗೆ ಪ್ರಚೋದನೆ ನೀಡುತ್ತಲೇ ಬರುತ್ತಿದ್ದಾರೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮತ್ತು ಇತರರ ಭಾವನೆಗೆ ದಕ್ಕೆ ತರುವ ಈ ರೀತಿಯ ವ್ಯಕ್ತಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿ.ಡಿ.ಮಂಜುನಾಥ್ ಒತ್ತಾಯಿಸಿದ್ದಾರೆ.
Breaking News
- *ಕಡಂಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ*
- *ಉತ್ತರ ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವ್ ರಾಕ್ ಗಾರ್ಡನ್*
- *ಶ್ವೇತ ವರ್ಣದ ಹಲ್ಲುಗಳಿಗಾಗಿ ಮನೆಮದ್ದು*
- *ವಯನಾಡು ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕಾರ*
- *ಕರಾಟೆ ಚಾಂಪಿಯನ್ಶಿಪ್ : ಹೆಚ್.ಎಂ.ಜಿತಿಕಾ ರಾಜ್ಯ ಮಟ್ಟಕ್ಕೆ ಆಯ್ಕೆ*
- *ನ.30 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ*
- *ವೀರ ಸೇನಾನಿಗಳಿಗೆ ಅಗೌರವ : ಕಠಿಣ ಕ್ರಮಕ್ಕೆ ವಿಶ್ವಕರ್ಮ ಸಮುದಾಯ ಜಾಗೃತ ಸೇವಾ ಟ್ರಸ್ಟ್ ಒತ್ತಾಯ*
- *ಮಂಗಳೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ : ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಕ್ರೀಡೆ ಪೂರಕ : ಸತೀಶ್ ರೈ ಕಟ್ಟಾವು*
- *ವೀರ ಸೇನಾನಿಗಳಿಗೆ ಅಗೌರವ : ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಆಗ್ರಹ*
- *ಬಾಳುಗೋಡುವಿನಲ್ಲಿ ಕೊಡವ ನಮ್ಮೆ ಉದ್ಘಾಟನೆ*