ಮಡಿಕೇರಿ ಡಿ.5 NEWS DESK : ಮಾಯಮುಡಿ ಗ್ರಾಮದ ನಿವಾಸಿ, ನಿವೃತ್ತ ಸೈನಿಕ ಆಪಟ್ಟೀರ ಬಿ.ಸುಬ್ಬಯ್ಯ (ಮಣಿ-86) ಅವರು ಇಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಮಾಯಮುಡಿ ಗ್ರಾ.ಪಂ ಅಧ್ಯಕ್ಷರಾದ ಎ.ಎಸ್.ಟಾಟು ಮೊಣ್ಣಪ್ಪ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು (05-12-2024) ಸಂಜೆ ಅವರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.