ಮಡಿಕೇರಿ ಡಿ.9 NEWS DESK : ದಕ್ಷಿಣ ಕನ್ನಡದ ಮಂಗಳೂರು ಶ್ರೀನಿವಾಸ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಡಿಕೇರಿಯ ಡಾ.ನಮ್ರೀನ್ ಆಸಿಫ್ ವಿ.ಎ ಅವರು “ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಯ ಪ್ರಭಾವದ ಕುರಿತು ಅಧ್ಯಯನ” ಎಂಬ ವಿಷಯದಲ್ಲಿ ಪಿಎಚ್‍ಡಿ ಪೂರ್ಣಗೊಳಿಸಿದ್ದಾರೆ. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮ್ಮ ವಿಶ್ವವಿದ್ಯಾನಿಲಯದ ಡಾ.ಗಣೇಶ್ ಎಸ್.ಆರ್, ಮಂಗಳೂರು ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಹಾಗೂ ಸಹ ಪ್ರಾಧ್ಯಾಪಕ ಡಾ.ಪ್ರವೀಣ್ ಹಾಗೂ ಸಂಶೋಧನಾ ಸಂಯೋಜಕರಾದ ಡಾ.ಶೈಲಶ್ರೀ ವಿ.ಟಿ ಅವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಯನ್ನು ಪೂರ್ಣಗೊಳಿಸಿದರು.
ಡಾ.ನಮ್ರೀನ್ ಆಸಿಫ್ ಅವರು ಮಡಿಕೇರಿಯ ಕೊಹಿನೂರು ರಸ್ತೆ ನಿವಾಸಿ ವಿ.ಎಸ್.ಮೊಹಮ್ಮದ್ ಆಸಿಫ್ ಹಾಗೂ ವಿ.ಎಸ್.ನಸೀಮಾ ದಂಪತಿಯ ಪುತ್ರಿ.