ವಿರಾಜಪೇಟೆ ಡಿ.10 NEWS DESK : ವಿರಾಜಪೇಟೆ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ನಾಟಿ ವೈದ್ಯ ಬಿ.ಜಿ.ನಟರಾಜ್ ಬೋರ್ಕರ್ ಅವರಿಗೆ ಭಾರತ ಭೂಷಣ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕೃಷಿ ಹಾಗೂ ನಾಟಿ ವೈದ್ಯ ಕ್ಷೇತ್ರದಲ್ಲಿ ಸೇವೆಯನ್ನು ಗುರುತಿಸಿ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಮೂಲತಃ ಬೇಟೋಳಿ ಗ್ರಾಮದ ರಾಮನಗರದ ನಿವಾಸಿಯಾಗಿರುವ ಬಿ. ಜಿ. ನಟರಾಜ್ ಬೋರ್ಕರ್ ಪ್ರಗತಿಪರ ಕೃಷಿಕರಾಗಿದ್ದು, ನಾಟಿ ವೈದ್ಯ ಸೇವೆಯನ್ನು ನೀಡುತ್ತಿದ್ದಾರೆ. ಅದರಲ್ಲೂ ಬಡವರಿಗೆ ಉಚಿತ ಸೇವೆಯನ್ನು ಹಲವಾರು ವರ್ಷಗಳಿಂದ ಸಲ್ಲಿಸುತ್ತಾ ಬಂದಿರುತ್ತಾರೆ. ಇವರು ಕೊಡಗು ಬಾಲವಲೀಕಾರ್ ಉತ್ತಮ ಜೀವನ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.