ಸೋಮವಾರಪೇಟೆ ಡಿ.12 NEWS DESK : ಕೊಡಗಿನ ವೀರ ಸೇನಾನಿಗಳನ್ನು ಅವಮಾನ ಮಾಡಿದ ವ್ಯಕ್ತಿಯನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಸರ್ವ ಜನಾಂಗದ ಒಕ್ಕೂಟದಿಂದ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕರೆ ನೀಡಿದ್ದ ಕೊಡಗು ಬಂದ್‍ಗೆ ಸೋಮವಾರಪೇಟೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟದಣದಲ್ಲಿ ಖಾಸಗಿ ಬಸ್ ಗಳ ಸಂಚಾರವಿಲ್ಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಪರದಾಡುವಂತಾಯಿತು. ಪಟ್ಟಣದಲ್ಲಿ ಬೆರಳಣಿಕೆಯ ಹೊಟೇಲ್‍ಗಳು ಮುಚ್ಚಲ್ಪಟಿದ್ದವು. ಉಳಿದಂತೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಶಾಲಾ-ಕಾಲೇಜು ವಾಹನಗಳಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ ತೆರಳಿದರು. ಎಂದಿನಂತೆ ಆಟೋ ಸಂಚಾರವಿತ್ತು. ತಾಲ್ಲೂಕು ಕಚೇರಿ, ಸಹಕಾರ ಹಾಗು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆದವು.