ವಿರಾಜಪೇಟೆ ಡಿ.18 NEWS DESK : ಕೊಡಗು ಬಲಿಜ ಸಮಾಜದ ವತಿಯಿಂದ 2023/24ನೇ ಶೈಕ್ಷಣಿಕ ಸಾಲಿನ ಎಸ್‍ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಸಾಧನೆ ಮಾಡಿರುವ ಬಲಿಜ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಗಿದೆ. ಕೊಡಗು ಜಿಲ್ಲೆಯ ಬಲಿಜ ವಿದ್ಯಾರ್ಥಿಗಳು IAS/IPS ಪರೀಕ್ಷೆಗೆ ತರಬೇತಿ ಹೊಂದುತ್ತಿದ್ದಲ್ಲಿ ರೂ.50 ಸಾವಿರ ಶಿಷ್ಯ ವೇತನ ನೀಡಲು ಉದ್ದೇಶಿಸಿದ್ದು ಈಗಾಗಲೇ ಓರ್ವ ವಿದ್ಯಾರ್ಥಿನಿ ಇದರ ಲಾಭ ಹೊಂದಿಕೊಂಡಿದ್ದಾರೆ. ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.70ಕ್ಕಿಂತಲೂ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳು ಜ.20ಕ್ಕೂ ಮುನ್ನ ಅಂಕಪಟ್ಟಿ ಪ್ರತಿ, ವಿದ್ಯಾರ್ಥಿಯ ಆಧಾರ್ ಪ್ರತಿ ಹಾಗೂ ಅರ್ಜಿಯೊಂದಿಗೆ (ಭಾವಚಿತ್ರ ಸಹಿತ) ಟಿ.ಎಲ್.ಶ್ರೀನಿವಾಸ್, ಅಧ್ಯಕ್ಷರು, ಕೊಡಗು ಬಲಿಜ ಸಮಾಜ, 5ನೇ ವಿಭಾಗ ಗೋಣಿಕೊಪ್ಪಲು – 571213 ಇಲ್ಲಿಗೆ ಅಂಚೆ ಮೂಲಕ ಕಳಿಸಬಹುದು. ಹೆಚ್ಚಿನ ವಿವರಗಳಿಗೆ 9945454133 ಅಥವಾ 8050023422 ಸಂಪರ್ಕಿಸಬಹುದು. ಅರ್ಹ ವಿದ್ಯಾರ್ಥಿಗಳು ಕೊಡಗು ಬಲಿಜ ಸಮಾಜದ ನಿಗಧಿತ ಅರ್ಜಿ ನಮೂನೆಯನ್ನು ಹೊಂದಿಕೊಂಡು, ಜಾತಿ ಪ್ರಮಾಣ ಪತ್ರದೊಂದಿಗೆ ಜ.20ಕ್ಕೂ ಮುನ್ನ ತಲುಪಿಸಬೇಕು. ಸೋಮವಾರಪೇಟೆ, ಕುಶಾಲನಗರ ತಾಲ್ಲೂಕು ಅರ್ಹ ವಿದ್ಯಾರ್ಥಿಗಳು ಗೀತಾ ಹರೀಶ್(ಶನಿವಾರಸಂತೆ), ಪ್ರಕಾಶ್ (ಸೋಮವಾರಪೇಟೆ) ಕುಮಾರ್ (ಶಿರಂಗಾಲ) ಇವರಿಗೆ ಖುದ್ದು ಅರ್ಜಿ ನೀಡಬಹುದು. ಮಡಿಕೇರಿ ತಾಲ್ಲೂಕು ವಿದ್ಯಾರ್ಥಿಗಳು ಟಿ.ವಿ.ಲೋಕೇಶ್ (ಮೇಕೇರಿ), ಪದ್ಮಾ (ಮಡಿಕೇರಿ), ಸುಮಾ (ಮಡಿಕೇರಿ) ಭವಾನಿ (ನಾಪೋಕ್ಲು ), ಶ್ರೀನಿವಾಸ್ (ಮೂರ್ನಾಡು) ಇವರಿಗೆ ತಲುಪಿಸಬಹುದು. ವೀರಾಜಪೇಟೆ, ಪೊನ್ನಂಪೇಟೆ ತಾಲ್ಲೂಕು ವಿದ್ಯಾರ್ಥಿಗಳು ಟಿ.ಎಲ್.ಶ್ರೀನಿವಾಸ್ (ಗೋಣಿಕೊಪ್ಪಲು), ಗೀತಾ ನಾಯ್ಡು (ಪಾಲಿಬೆಟ್ಟ), ಯತಿರಾಜ್ ನಾಯ್ಡು (ವೀರಾಜಪೇಟೆ), ಟಿ.ಆರ್.ವಿಜಯ್(ಪೊನ್ನಂಪೇಟೆ) ಇವರಿಗೆ ಖುದ್ದು ನೀಡಲು ಅವಕಾಶವಿದೆ. ಗೋಣಿಕೊಪ್ಪಲಿನಲ್ಲಿ ಜರುಗುವ ಸಮಾರಂಭದಲ್ಲಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವದು. ಇದೇ ಸಂದರ್ಭ ಪೊನ್ನಂಪೇಟೆ ತಾಲ್ಲೂಕು, ವಿರಾಜಪೇಟೆ ತಾಲ್ಲೂಕು ಮಟ್ಟದ ಬಲಿಜ ಸಮಾವೇಶ ಏರ್ಪಡಿಸುವ ಮೂಲಕ ನೂತನ ತಾಲ್ಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಉದ್ಧೇಶವಿದೆ ಎಂದು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ತಿಳಿಸಿದ್ದಾರೆ.