ಮಡಿಕೇರಿ ಡಿ.18 NEWS DESK : ಕೊಡಗಿನ ಸಾಂಪ್ರದಾಯಿಕ ಸುಗ್ಗಿಹಬ್ಬ ಹುತ್ತರಿ ಹಬ್ಬವನ್ನು ಸುಂಟಿಕೊಪ್ಪ ಸಮೀಪದ ಪನ್ಯದ ಮಾಗುಲು ಐನ್ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮಾಗುಲು ವಸಂತ ಅವರ ಗದ್ದೆಯಲ್ಲಿ ಮಾಗುಲು ರವೀಂದ್ರ ಕದಿರನ್ನು ತೆಗೆದು ಅಯ್ಯಪ್ಪ ದೇವರ ಸನ್ನಿಧಾನಕ್ಕೆ ಮೆರವಣಿಗೆ ಮೂಲಕ ತಂದು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಧಾನ್ಯಲಕ್ಷ್ಮಿಯನ್ನು ಐನ್ ಮನೆಗೆ ತಂದು ವಿವಿಧ ಉಪಕರಣಗಳಿಗೆ ಕಟ್ಟಲಾಯಿತು. ಗದ್ದೆಯಿಂದ ತಂದ ಧಾನ್ಯಲಕ್ಷ್ಮಿಯ ಹೊಸ ಅಕ್ಕಿಯಿಂದ ಖಾದ್ಯ ತಯಾರಿಸಲಾಯಿತು. ಹಿರಿಯರು, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.