ಮಡಿಕೇರಿ ಡಿ.19 NEWS DESK : ನಗರದ ಮೀನುಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಸಮುದಾಯ ಬಾಂಧವರ ಅನುಕೂಲಕ್ಕಾಗಿ ‘ಮೃತದೇಹ’ವನ್ನು ಒಂದು ದಿನಗಳ ಕಾಲ ಸುರಕ್ಷಿತವಾಗಿಡುವ ಶೀತಲೀಕರಣ(ಫ್ರೀಜರ್) ಯಂತ್ರವನ್ನು ಉದ್ಘಾಟಿಸಲಾಯಿತು. ನಗರದ ಮಲಬಾರ್ ರಸ್ತೆಯಲ್ಲಿರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶೀತಲೀಕರಣ ಯಂತ್ರವನ್ನು ಉದ್ಘಾಟಿಸಿ, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮಾತನಾಡಿದ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ.ಸುಮೇಶ್ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದಿಂದ ಜನಾಂಗ ಬಾಂಧವರಿಗೆ ಮರಣ ನಿಧಿ, ಮನೆ ನಿರ್ಮಾಣ, ಸಾಂಸ್ಕøತಿಕ ಕಾರ್ಯಕ್ರಮಗಳ ಅಯೋಜನೆ, ಕ್ರೀಡಾ ಕಾರ್ಯಕ್ರಮ, ಜನಾಂಗ ಕಲ್ಯಾಣ ಹಾಗೂ ಲೋಕ ಕಲ್ಯಾಣದ ಹಿತದೃಷ್ಟಿಯಿಂದ ಜನಪರ ಸೇವೆಗಳನ್ನು ಸುಮಾರು 16 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಸಂಘದ ಸದಸ್ಯರಿಂದ ದೇಣಿಗೆಯನ್ನು ಪಡೆದು ಮೃತದೇಹವನ್ನು ದಿನಗಳ ಕಾಲ ಕಾಯ್ದಿರಿಸಲು ಒಂದು ಲಕ್ಷ ಮೌಲ್ಯದ ಶೀತಲೀಕರಣ ಯಂತ್ರವನ್ನು ಖರೀದಿಸಿ, ಅದರ ಬಳಕೆಗೆ ಅನುವು ಮಾಡಿಕೊಡಲಾಗಿದೆ ಎಂದರು. ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಕಾರ್ಯದರ್ಶಿ ಸಿ.ಆರ್. ಬಾಬು ಮಾತನಾಡಿ, ಶೀತಲೀಕರಣ ಸೌಲಭ್ಯ ಪಡೆದುಕೊಳ್ಳುವವರು, ಉಂತ್ರದ ನಿರ್ವಹಣಾ ವೆಚ್ಚವಾಗಿ ನಿಗದಿತ ಮೊತ್ತವನ್ನು ನೀಡಬೇಕಾಗುತ್ತದೆ. ಸಂಘದ ಸದಸ್ಯರಿಗೆ ಈ ಸೌಲಭ್ಯ ಉಚಿತವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಉಚಿತವಾಗಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9035197151, 9448721118, 9731258197, 8722179009 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಗೌರವ ಅಧ್ಯಕ್ಷರಾದ ಪದ್ಮನಾಭ, ಉಪಾಧ್ಯಕ್ಷರಾದ ಸಿ.ಆರ್.ಸಜೀವನ್, ಕಾರ್ಯಕಾರಿ ಸದಸ್ಯರಾದ ಪಿ.ಡಿ.ಮುರುಳಿ, ವಿ.ಬಿ.ಸುರೇಶ್, ಎ.ಎ.ಪ್ರಸಾದ್, ಕೆ.ರಾಜನ್ ಮತ್ತು ಪಿ.ಎಂ.ಚಂದ್ರಪ್ರಕಾಶ್ ಉಪಸ್ಥಿತರಿದ್ದರು.