ಮಡಿಕೇರಿ ಡಿ.19 NEWS DESK : ಮಡಿಕೇರಿಯ ಭಾರತಿ ರಮೇಶ್ ಗೆ ದೇವಾಂಗ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ನೆಲಮಂಗಲದ ಕೆಂಪಲಿಂಗನಹಳ್ಳಿಯ ದೇವಾಂಗ ಶಾಖಾಮಠದಲ್ಲಿ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಹೇಮಕೂಟ ಹಂಪಿ ಮತ್ತು ಕರ್ನಾಟಕ ರಾಜ್ಯ ದೇವಾಂಗ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಶ್ರೀ ದೇವಲ ಮಹರ್ಷಿ ಜಯಂತ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಲಗುರುಗಳಾದ ಶ್ರೀ ದಯಾನಂದ ಪುರಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ ಮತ್ತು ರಾಜ್ಯ ಪದಾಧಿಕಾರಿಗಳು ಭಾರತಿ ರಮೇಶ್‌ಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಕರ್ನಾಟಕ ರಾಜ್ಯದ 24 ಜಿಲ್ಲೆಗಳಿಂದ ಜಿಲ್ಲೆಗೊಬ್ಬರಂತೆ ದೇವಾಂಗ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿದ್ದು, ಮಡಿಕೇರಿ ಅಧ್ಯಕ್ಷ ಕೆ.ಎನ್.ಗಜಾನನ ಹಾಗೂ ಕುಲಬಾಂಧವರ ಒಮ್ಮತದ ನಿರ್ಧಾರದಂತೆ “ದೇವಾಂಗ ರತ್ನ ರಾಜ್ಯಪ್ರಶಸ್ತಿಗೆ ಭಾರತಿ ರಮೇಶ್ ಅವರನ್ನ ಆಯ್ಕೆ ಮಾಡಲಾಗಿದೆ. 24 ಜನ ಮಹನೀಯರ ನಡುವೆ ಒಬ್ಬಳು ಮಹಿಳೆಯನ್ನು ಆಯ್ಕೆ ಮಾಡಿ ಕಳುಹಿಸಿದ್ದು ಕೊಡಗಿನ ದೇವಾಂಗ ಕುಲದವರ ಹೆಗ್ಗಳಿಕೆಯಾಗಿದೆ ಎಂದು ಕೊಡಗು ಜಿಲ್ಲಾಧ್ಯಕ್ಷ ಡಿ.ವಿ.ಜಗದೀಶ್ ಹೇಳಿದ್ದಾರೆ.