ಮಡಿಕೇರಿ, ಡಿ.23 NEWS DESK : ಗ್ರಾಮೀಣ ಜನಪದ ಕ್ರೀಡೆಗಳು, ಹಳ್ಳಿಯ ಸೊಗಡು ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು
ಜೀವಂತವಾಗಿ ಉಳಿಸಿ ಬೆಳಸುವ ಜತೆಗೆ ಮುಂದಿನ ತಲೆಮಾರಿಗೂ ತಿಳಿಸಿಕೊಡಬೇಕಾಗಿದೆ ಎಂದು ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ( ಗ್ರೇಡ್ – 1 ) ದ ಅಧ್ಯಕ್ಷರೂ ಆದ ಜನಪದ ಕ್ರೀಡೆಯ ಸಂಪನ್ಮೂಲ ವ್ಯಕ್ತಿ ಡಾ ಸದಾಶಿವಯ್ಯ ಎಸ್.ಪಲ್ಲೇದ್ ಹೇಳಿದರು.
ಕೊಡಗು ಜಿಲ್ಲಾಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಮೇಳ( ಖಚಿಟಟಥಿ ) ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕುಶಾಲನಗರ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕುಶಾಲನಗರ ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸ್ಕೌಟ್ಸ್, ಗೈಡ್ಸ್ ಮಕ್ಕಳ ಮೇಳ (ರ‍್ಯಾಲಿ)ದ ಅಂಗವಾಗಿ ಏರ್ಪಡಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಕ್ರೀಡೆಗಳಲ್ಲಿ ಪ್ರತಿ ಆಟದಲ್ಲಿ ಮಾನವೀಯ ಮೌಲ್ಯವಿದೆ. ಇದರಿಂದ ಮಕ್ಕಳಲ್ಲಿ ಸಾಮಾಜಿಕ ಬೆಳೆಸಲು ಸಹಕಾರಿಯಾಗಿವೆ. ಇಂತಹ ಕ್ರೀಡೆಗಳು ಇಂದಿನ ಶಾಲಾ ಮಕ್ಕಳಿಗೆ ಪರಿಚಯಿಸಲು ಮಕ್ಕಳ ಮೇಳ ಸಹಕಾರಿಯಾಗಿವೆ ಎಂದರು. ಗ್ರಾಮೀಣ ಆಟಗಳ ಮೂಲಕ ನಂಬಿಕೆ, ಸಂಪ್ರದಾಯ, ಮೂಲ ಸಂಸ್ಕೃತಿಯ ಬೆಳವಣಿಗೆಗೆ ಬೆಸುಗೆಯಾಗಿದೆ ಎಂದು ಡಾ ಸದಾಶಿವಯ್ಯ ಪಲ್ಲೇದ್ ಹೇಳಿದರು. ಪ್ರಾಸ್ತಾವಿಕವಾಗಿ
ಮಾತನಾಡಿದ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ , ಮಕ್ಕಳ ಮೇಳದಲ್ಲಿ ಇಂತಹ ಕ್ರೀಡೆಗಳು ಶಾಲಾ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸಲು ಸಹಕಾರಿಯಾಗಿವೆ ಎಂದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ನ ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಹಮ್ಮಿಕೊಂಡಿರುವ ಇಂತಹ ಕ್ರೀಡಾಕೂಟಗಳು ಮಕ್ಕಳಲ್ಲಿ ಜನಪದ ಕ್ರೀಡೆಗಳು, ಗ್ರಾಮೀಣ ಜನರ ಬದುಕಿನ ಕಲೆ, ಹಳ್ಳಿಗಾಡಿನ ನಮ್ಮ ಮೂಲ ಸಂಸ್ಕೃತಿಯನ್ನು ಪರಿಚಯಿಸಲು ಸಾಧ್ಯವಾಗುತ್ತವೆ ಎಂದರು.
ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಆಧುನಿಕ ಅಬ್ಬರಕ್ಕೆ ಸಿಲುಕಿರುವ ಜಾನಪದ ಕಲೆಗಳು ನಸಿಶಿ ಹೋಗದಂತೆ ಮುಂದಿನ ಪೀಳಿಗೆಗೆ ಬೆಳಸಬೇಕು ಎಂದು ಕಿವಿಮಾತು ಹೇಳಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಇಂತಹ ಕ್ರೀಡೆಗಳು ಮಕ್ಕಳಲ್ಲಿ ಕ್ರೀಡಾಪೂರ್ತಿ ಬೆಳೆಸಲು ಸಹಕಾರಿಯಾಗಿವೆ ಎಂದರು. ಸಂಪನ್ಮೂಲ ವ್ಯಕ್ತಿ ಟಿ.ಬಿ.ಕುಮಾರಸ್ವಾಮಿ ಮತ್ತು ಗೈಡ್ಸ್ ಹಾಗೂ ಗೈಡ್ಸ್ ನ ದಳ ನಾಯಕರು, ಶಿಕ್ಷಕರು ವಿವಿಧ ಕ್ರೀಡೆಗಳನ್ನು ನಡೆಸಿಕೊಟ್ಟರು. ಮಕ್ಕಳಿಗೆ ಜಾನಪದ ಕ್ರೀಡೆಗಳಾದ ಲಗ್ಗೋರಿ, ಬುಗುರಿ, ಕುಂಟೆಬಿಲ್ಲೆ, ಗೋಲಿ, ತೂರು ಚೆಂಡು ಆಟ, ಗೋಣಿಚೀಲದ ಓಟ , ಬಲ ಪ್ರದರ್ಶನದ ಆಟ, ಕಣ್ಣು ಮುಚ್ಚಾಲೆ ಆಟ, ಕುಂಟಾಟ, ಹಗ್ಗ ಎಳೆದಾಟ, ಚೆಂಡಾಟ ಮುಂತಾದ ಆಟಗಳನ್ನು ಆಡಿಸುವ ಮೂಲಕ ಅವುಗಳ ಮೌಲ್ಯಗಳನ್ನು ಪರಿಚಯಿಸಲಾಯಿತು. ಮಕ್ಕಳು ಸಂತಸದಿಂದ ತಮ್ಮನ್ನು ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸಂತಸಪಟ್ಟರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ , ಸ್ಥಾನೀಕ ಆಯುಕ್ತ ಎಚ್.ಆರ್.ಮುತ್ತಪ್ಪ, ಜಿಲ್ಲಾ ಗೈಡ್ಸ್ ಸಹಾಯಕ ಆಯುಕ್ತ ಟಿ.ಜಿ.ಪ್ರೇಮಕುಮಾರ್, ಜಿಲ್ಲಾ ಗೈಡ್ಸ್ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನಾ, ಜಿಲ್ಲಾ ತರಬೇತಿ ಆಯುಕ್ತರಾದ ಕೆ.ಯು.ರಂಜಿತ್, ಎಚ್. ಮೈಥಿಲಿರಾವ್, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಸೋಮಪ್ಪ, ಕಾರ್ಯಾಧ್ಯಕ್ಷ ಎ.ಎಂ.ತಮ್ಮಯ್ಯ, ಉಪಾಧ್ಯಕ್ಷರಾದ ಕೆ.ವಿ.ಅರುಣ್, ಕೆ.ಪಿ.ರಾಜು,ರಾಜೇಗೌಡ, ತೀರ್ಥೇಶ್ ಕುಮಾರ್, ಶಾಂತಿ, ರೋಹಿಣಿ, ಕಾರ್ಯದರ್ಶಿ ಎಂ.ಎಸ್.ಗಣೇಶ್, ಸಹ ಕಾರ್ಯದರ್ಶಿ ಎಸ್.ಆರ್.ಶಿವಲಿಂಗ, ಬುಲ್ ಬುಲ್ ನ ಮುಖ್ಯಸ್ಥೆ ಡೈಸಿ , ಗೈಡ್ಸ್ ನ ಪ್ರಮುಖರಾದ ಕೆ.ಬಿ.ಉಷಾರಾಣಿ,
ತಾಲ್ಲೂಕು ದೈಹಿಕ ಶಿಕ್ಷಣ ಅಧೀಕ್ಷಕಿ ಸುಕುಮಾರಿ, ಸಿ.ಆರ್.ಪಿ. ಟಿ.ಈ.ವಿಶ್ವನಾಥ್ ಸೇರಿದಂತೆ ಸಂಸ್ಥೆಯ ವಿವಿಧ ಹಂತದ ಪದಾಧಿಕಾರಿಗಳು, ವಿವಿಧ ಶಾಲೆಗಳಿಂದ ಆಗಮಿಸಿದ್ದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ ದಳ ನಾಯಕರು, ಶಿಕ್ಷಕರು/ ಶಿಕ್ಷಕರು ಇದ್ದರು.