ಮಡಿಕೇರಿ NEWS DESK ಡಿ.27 : ಯೇಸುಕ್ರಿಸ್ತರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೌತ್ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಕಿಡಿಗೇಡಿಯೊಬ್ಬ ಕ್ರಿಸ್‌ಮಸ್ ಹಬ್ಬದ ಕುರಿತು ಅಗೌರವದ ಪೋಸ್ಟ್ ಮಾಡಿರುವುದಲ್ಲದೆ ಯೇಸುಕ್ರಿಸ್ತರನ್ನು ಕೀಳಾಗಿ ಕಂಡಿದ್ದಾನೆ. ಈತನ ಹೇಳಿಕೆಗೆ ಬೆಂಬಲವಾಗಿ ಮತ್ತೊಬ್ಬ ಕಿಡಿಗೇಡಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದಾನೆ. ಇದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನವಾಗಿದ್ದು, ಪೊಲೀಸರು ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕ್ರಿಶ್ಚಿಯನ್ ಅಸೋಸಿಯೇಷನ್ ನ ಪ್ರಮುಖರು ಒತ್ತಾಯಿಸಿದರು. ಯೇಸುಕ್ರಿಸ್ತರನ್ನು ಅವಹೇಳನ ಮಾಡಿ ಕ್ರೆöÊಸ್ತ ಸಮುದಾಯದ ಭಾವನೆಗೆ ದಕ್ಕೆ ತಂದಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ದೂರು ನೀಡುವ ಸಂದರ್ಭ ಸೌತ್ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ನ ಅಧ್ಯಕ್ಷ ಎ.ಜೆ.ಬಾಬು, ಕಾರ್ಯದರ್ಶಿ ಸಿ.ಜೆ.ಆಂಟೋ, ಖಜಾಂಚಿ ಬೇಬಿ ಜಾರ್ಜ್, ನಿರ್ದೇಶಕರುಗಳಾದ ಅಂತೋಣಿ ರಾಬಿನ್, ವರ್ಗೀಸ್ ಪಿ.ಒ, ದಾದು ಜೋಸೆಫ್, ಥಾಮಸ್ ಮನ್ನಾರತ್ ಮತ್ತಿತರರು ಹಾಜರಿದ್ದರು.