ವಿರಾಜಪೇಟೆ ಡಿ.27 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅರ್ಹ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರದ ಮಾತೃಶ್ರೀ ಡಾ. ವಿ.ಹೇಮಾವತಿ ಅವರ ವಾತ್ಸಲ್ಯಮಯಿ ಚಿಂತನೆಯಂತೆ ಸಮಾಜದಲ್ಲಿನ ಅತ್ಯಂತ ಆಶಕ್ತ ಹಿರಿಯರನ್ನು ಗುರುತಿಸಿ ತನ್ನ ಕಾರ್ಯಕರ್ತರ ಮೂಲಕ ಮಾಸಿಕವಾಗಿ ಒಂದು ಸಾವಿರದಂತೆ ಮಾಸಾಶನವನ್ನು ನೀಡಿ ವಾತ್ಸಲ್ಯ ಪೌಷ್ಠಿಕಾಂಶ ಭರಿತ ಆಹಾರವನ್ನು ಒದಗಿಸಿ ಒದಗಿಸಲಾಗುವುದು. ಅದರಂತೆ ವಿರಾಜಪೇಟೆ ಪೊನ್ನಂಪೇಟೆ ತಾಲೂಕಿನ ಹದಿನೆಂಟು ಕುಟುಂಬಗಳಿಗೆ ಗೃಹೋಪಯೋಗಿ ಅಗತ್ಯ ಸಾಮಾಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು. ಕೊಡಗು ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ, ತಾಲ್ಲೂಕು ಯೋಜನಾಧಿಕಾರಿ ಬಿ.ದಿನೇಶ್ ಮತ್ತು ತಾಲ್ಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಆರ್.ಶ್ರೇಯಾ ತಾಲೂಕಿನಾದ್ಯಂತ ಏಕಕಾಲದಲ್ಲಿ ವಿತರಿಸಿದರು.