
ಮಡಿಕೇರಿ ಡಿ.27 NEWS DESK : ನಗರದ ಹೊಸ ಬಡಾವಣೆಯಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಾಲಯದ ಇಪ್ಪತ್ತನಾಲ್ಕನೇ ವಾರ್ಷಿಕೋತ್ಸವವು ಡಿ.29 ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಪ್ರಸನ್ನ ಗಣಪತಿಗೆ ಎಳನೀರು ಅಭಿಷೇಕ, ಪಂಚಾಮೃತ ಅಭಿಷೇಕ, ಕ್ಷೇರಾಭಿಷೇಕ ಮತ್ತು ಅಲಂಕಾರ ಪೂಜೆ ನಡೆಯಲಿದ್ದು, 9.30 ಗಂಟೆಗೆ ಸ್ಥಳ ಶುದ್ಧಿ, ಪುಣ್ಯಾಹ, 10 ಗಂಟೆಗೆ ಮಹಾಗಣಪತಿ ಹೋಮ ಹಾಗೂ ನವಕ ಕಳಸ ಪೂಜೆ ಜರುಗಲಿದೆ.
ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, 1 ಗಂಟೆಗೆ ಅನ್ನ ಸಂತರ್ಪಣೆ ನೆರವೇರಲಿದ್ದು, ಸಂಜೆ 5 ಗಂಟೆಗೆ ಭಜನಾ ಕಾರ್ಯಕ್ರಮ, 7 ಗಂಟೆಗೆ ರಂಗಪೂಜೆ, 7.30 ಗಂಟೆಗೆ ಮಹಾಪೂಜೆ, 8 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಅಧ್ಯಕ್ಷರು, ಆಡಳಿತಮಂಡಳಿ ಸದಸ್ಯರು ಮನವಿ ಮಾಡಿದ್ದಾರೆ.









