ಕುಶಾಲನಗರ ಡಿ.27 NEWS DESK : ಕೂಡುಮಂಗಳೂರು ಗ್ರಾ.ಪಂ ನ ಎರಡನೇ ವಾರ್ಡ್ ನ ಬಸವೇಶ್ವರ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದ್ದು, ಕಾಮಗಾರಿಯನ್ನು ಪಿಡಿಓ ಸಂತೋಷ್ ಹಾಗೂ ಗ್ರಾ.ಪಂ ಕೆ.ಬಿ.ಶಂಶುದ್ಧೀನ್ ಪರಿಶೀಲನೆ ನಡೆಸಿದರು. ಬಸವೇಶ್ವರ ಬಡಾವಣೆಯ ವಿಜಿ ಅವರ ಮನೆಯಿಂದ ಬೇಬಿ ಅವರ ಮನೆವರೆಗೆ 1.8ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ಪರಿಶೀಲಿಸಿ ಮಾತನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಕೂಡುಮಂಗಳೂರು ಗ್ರಾ.ಪಂ ನ ಎರಡನೇ ವಾರ್ಡ್ ನಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ನಡೆಸುತ್ತಾ ಬರಲಾಗಿದೆ. ವಾರ್ಡ್ ಗೆ ಒಳಪಡುವ ಸುಂದರನಗರ, ವಿನಾಯಕ ಬಡಾವಣೆ, ನವಗ್ರಾಮ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ಸಮಾನವಾಗಿ ಹಾಗೂ ಆದ್ಯತೆಗೆ ಅನುಗುಣವಾಗಿ ಕಾಮಗಾರಿಗಳನ್ನು ಬಳಸಲಾಗಿದೆ ಎಂದರು. ಈ ಸಂದರ್ಭ ಬಸವೇಶ್ವರ ಬಡಾವಣೆಯ ಗ್ರಾಮಸ್ಥ ಅನೀಶ್, ಗೌರಮ್ಮ, ರಫೀಕ್ ಹಾಗೂ ಇನ್ನಿತರರು ಇದ್ದರು.