ನಾಪೋಕ್ಲು ಡಿ.28 NEWS DESK : ನಾಪೋಕ್ಲು ಸಹಕಾರಿ ದವಸ ಭಂಡಾರದ ನೂತನ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಹಕಾರಿ ದವಸ ಭಂಡಾರದ ಕಟ್ಟಡದಲ್ಲಿ ನಡೆದ ಚುನಾವಣೆಯಲ್ಲಿ ಕಂಗಂಡ ಎಂ.ಪೂವಪ್ಪ, ಶಿವಚಾಳಿಯಂಡ ಬೋಪಣ್ಣ, ಕುಲ್ಲೇಟಿರ ಅರುಣ್ ಬೇಬ, ಶಿವಚಾಳಿಯಂಡ ಶುಭಾಷ್ ಸೋಮಯ್ಯ, ಕುಲ್ಲೇಟಿರ ತಮ್ಮಯ್ಯ, ಅರೆಯಡ ವಿನೋದ್, ಪಾಡಿಯಮ್ಮಡ ಮಹೇಶ್, ಬೊಪ್ಪಂಡ ಕಾಳಪ್ಪ, ಅಮ್ಮಂಡ ಅಶೋಕ್, ಅಜ್ಜೆಟಿರ ರಾಣಿ ಪಳಂಗಪ್ಪ, ಕುಂಬಂಡ ಚಿತ್ರ ಲೋಕನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಗ್ರಾಮ ಅಭಿವೃದ್ಧಿ ಅಧಿಕಾರಿ ಅಶೋಕ್ ಕಾರ್ಯ ನಿರ್ವಹಿಸಿದರು. ಸಹಕಾರಿ ದವಸ ಭಂಡಾರದ ಕಾರ್ಯದರ್ಶಿ ಕುಂಬಂಡ ಕೇಶವ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.