ಮಡಿಕೇರಿ NEWS DESK ಜ.2 : ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಪಳಂಗೋಟು ದಿವಿನ್ ಅವರಿಗೆ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ “ಯುನೈಟೆಡ್ ಕೊಡವ ಆರ್ಗನೈಜೇಷನ್ ‘ಯುಕೊ’ ” ವತಿಯಿಂದ ಗೌರವ ಅರ್ಪಿಸಲಾಯಿತು. ಯುನೈಟೆಡ್ ಕೊಡವ ಆರ್ಗನೈಜೇಶನ್ (ಯುಕೊ) ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ ಮುಖಂಡರಾದ ಕಳ್ಳಿಚಂಡ ರಾಬಿನ್ ಸುಬ್ಬಯ್ಯ , ನೆಲ್ಲಮಕ್ಕಡ ಜಫ್ರಿ ಮಾದಯ್ಯ, ಬೊಳ್ಳಿಯಂಗಡ ಬೋಪಣ್ಣ ಮತ್ತಿತರ ಪ್ರಮುಖರು ದಿವಿನ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಹುತಾತ್ಮ ಯೋಧರ ತಾಯಿಗೆ ಸಾಂತ್ವನ ತಿಳಿಸಿದರು.