ಪ್ರತಿಯೊಬ್ಬರೂ ತಮ್ಮ ಚರ್ಮವು ಕಲೆರಹಿತವಾಗಿ ಕಾಂತಿಯುತಾಗಿರಬೇಕೆಂದು ಬಯಸುತ್ತಾರೆ. ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಫೇಶಿಯಲ್, ಸ್ಕಿನ್ ಕೇರ್ ಪ್ಯಾಕ್, ಬ್ಯೂಟಿ ಉತ್ಪನ್ನಗಳನ್ನು ಬಳಸುತ್ತಾರೆ. ಈ ವಸ್ತುಗಳು ಚರ್ಮವನ್ನು ಸುಂದರವಾಗಿಸುತ್ತದೆ, ಆದರೆ ಮೂಗಿನ ಮೇಲಿನ ಕಪ್ಪು ಚುಕ್ಕೆಗಳಂತೆ ಕಾಣುವ ಬ್ಯಾಕ್‌ಹೆಡ್ಸ್‌ಗಳು ನಿಮ್ಮ ಮುಖದ ಅಂದವನ್ನು ಹಾಳುಮಾಡುತ್ತದೆ. ಮೂಗಿನ ಮೇಲೆ ಕಾಣಿಸಿಕೊಳ್ಳುವ ಈ ಕಪ್ಪು ಚುಕ್ಕೆಗಳ ಸಮಸ್ಯೆಗಳು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೀವು ಮೂಗಿನ ತುದಿಯಲ್ಲಿ ಬ್ಲ್ಯಾಕ್‌ಹೆಡ್ ಸಮಸ್ಯೆಯನ್ನು ಹೊಂದಿದ್ದರೆ ಮೊಟ್ಟೆಗಳನ್ನು ಬಳಸುವ ಮೂಲಕ ಬ್ಲ್ಯಾಕ್‌ಹೆಡ್ಸ್‌ಗಳನ್ನು ನಿವಾರಿಸಬಹುದು.
ತಯಾರಿಸುವುದು ಹೇಗೆ?
ಅಕ್ಕಿ ಹಿಟ್ಟು – 1/2 ಟೀಸ್ಪೂನ್
ಟಿಶ್ಯೂ ಪೇಪರ್ – 1
ಮೊಟ್ಟೆ – 1
ಮುಲ್ತಾನಿ ಮಿಟ್ಟಿ – 1/2 ಟೀಸ್ಪೂನ್
ಇದನ್ನು ತಯಾರಿಸಲು ಒಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿಭಾಗ ಮತ್ತು ಹಳದಿ ಭಾಗಗಳನ್ನು ಪ್ರತ್ಯೇಕಿಸಿ. ಈಗ ಇನ್ನೊಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿಭಾಗವನ್ನು ಹಾಕಿ. ಇದಕ್ಕೆ ಅಕ್ಕಿ ಹಿಟ್ಟು ಮತ್ತು ಮುಲ್ತಾನಿ ಮಿಟ್ಟಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮೂಗಿನ ತುದಿ ಹಾಗೂ ಮುಖದ ಇತರ ಭಾಗಗಳಲ್ಲಿ ಕಂಡುಬರುವ ಕಪ್ಪು ಚುಕ್ಕೆಗಳ ಮೇಲೆ ಹಚ್ಚಿರಿ. ಟಿಶ್ಯೂ ಪೇಪರ್‌ನ ಉದ್ದನೆಯ ಪಟ್ಟಿಗಳನ್ನು ಕತ್ತರಿಸಿ ಮತ್ತು ಈ ಪೇಸ್ಟ್‌ನ ಮೇಲೆ ಅದನ್ನು ಹಚ್ಚಿರಿ. ನಂತರ ಮತ್ತೊಮ್ಮೆ ಟಿಶ್ಯೂ ಪೇಪರ್ ಮೇಲೆ ಮೊಟ್ಟೆಯ ಪೇಸ್ಟ್ ಅನ್ನು ಹಚ್ಚಿ ಮತ್ತು ಒಣಗಲು ಬಿಡಿ. ಮೊಟ್ಟೆ ಮತ್ತು ಟಿಶ್ಯೂ ಪೇಪರ್‌ನ ಪೇಸ್ಟ್ ಒಣಗಿದಾಗ, ಮೃದುವಾದ ಕೈಗಳಿಂದ ಈ ಪಟ್ಟಿಯನ್ನು ತೆಗೆದುಹಾಕಿ. ಕೆಲವೇ ನಿಮಿಷಗಳಲ್ಲಿ ನೀವು ಮೂಗು ಮತ್ತು ಇತರ ಭಾಗಗಳಲ್ಲಿರುವ ಬ್ಲ್ಯಾಕ್‌ಹೆಡ್‌ಗಳು ಸಂಪೂರ್ಣವಾಗಿ ಮಾಯವಾಗುವುದನ್ನು ನೀವು ನೋಡುತ್ತೀರಿ. ಕಪ್ಪು ಚುಕ್ಕೆಗಳನ್ನು ತೆಗೆದುಹಾಕಲು ನೀವು ಈ ಮೊಟ್ಟೆಯ ಪ್ಯಾಕ್‌ನ್ನು ವಾರಕ್ಕೆ 1 ರಿಂದ 2 ಬಾರಿ ಬಳಸಬಹುದು.