ಸಿದ್ದಾಪುರ ಜ.3 NEWS DESK : ಪೊನ್ನಂಪೇಟೆ ತಾಲ್ಲೂಕಿನ ಕೋಣನಕಟ್ಟೆ- ಮರಪಾಲ ಗ್ರಾಮದಲ್ಲಿರುವ ಸಂತ ಅಂತೋಣಿ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಜ.5 ರಂದು ನಡೆಯಲಿದೆ. ಸರ್ವಧರ್ಮ ಸಮನ್ವಯತೆ ಹೊಂದಿರುವ ಗ್ರಾಮದ ಸಂತ ಅಂತೋಣಿಯವರ ದೇವಾಲಯದಲ್ಲಿ ಅಂದು ಸಂಜೆ 4 ಗಂಟೆಗೆ ಗಾಯನ ಬಲಿಪೂಜೆ ನಡೆಯಲಿದ್ದು, ಮೈಸೂರು ಪ್ರಾಂತ್ಯ ದ ಕೌನ್ಸಿಲರ್ ಫಾರ್ ಸೋಶಿಯಲ್ ಅಪೋಸಿಲೇಟ್, ಸೇಂಟ್ ಪಾಲ್ಸ್ ನ ಫಾದರ್ ಜೆ.ಬಿ.ಪನಚಿಕಲ್ ಸಿ.ಎಂ.ಐ . ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ. ವಾಜನ ಪ್ರಭೋಧನೆಯನ್ನು ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಮದಲೈ ಮುತ್ತು ನಡೆಸಿಕೊಡಲಿದ್ದಾರೆ. ನಂತರ ಭವ್ಯ ಮೆರವಣಿಗೆ, ಅನ್ನ ಸಂತರ್ಪಣೆ ನಡೆಯಲಿದೆ. ಜಿಲ್ಲೆಯ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾಲಿಬೆಟ್ಟದಿಂದ ಬರುವ ಭಕ್ತಾದಿಗಳಿಗೆ ಮಧ್ಯಾಹ್ನ 3 ಗಂಟೆಗೆ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ದೇವಾಲಯದ ಫಾದರ್ ಹರ್ಷಿತ್ ದೇವ್ ಸಿ.ಎಂ.ಐ ತಿಳಿಸಿದ್ದಾರೆ.