ಮಡಿಕೇರಿ NEWS DESK ಜ.3 : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವಂತೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿ ನಗರಸಭಾ ಆಯುಕ್ತÀ ಹೆಚ್.ಆರ್.ರಮೇಶ್ ಅವರಿಗೆ ಮನವಿ ಸಲ್ಲಿಸಿದೆ. ಇಡೀ ರಾಜ್ಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಇಲ್ಲದ ಏಕೈಕ ಜಿಲ್ಲೆ ಕೊಡಗು. ಈ ಹಿಂದಿನಿoದಲು ಪ್ರತಿಮೆ ಸ್ಥಾಪನೆಗೆ ಮನವಿ ಮಾಡಿಕೊಂಡು ಬಂದಿದ್ದರು ಅದು ಫಲಪ್ರದವಾಗಿಲ್ಲವೆಂದು ಸಮಿತಿಯ ಪ್ರಮುಖರು ಬೇಸರ ವ್ಯಕ್ತಪಡಿಸಿದರು. ಸಮಿತಿ ಸದಸ್ಯ ಟಿ.ಈ.ಸುರೇಶ್ ಅವರು ಮಾತನಾಡಿ, ಮಡಿಕೇರಿಯ ಕಾವೇರಿ ಕಲಾಕ್ಷೇತ್ರದ ಪಕ್ಕದ ಉದ್ಯಾನವನ, ಜಿಲ್ಲಾಧಿಕಾರಿಗಳ ಕಛೇರಿ ಬಳಿಯ ಉದ್ಯಾನವನ, ಫೀ.ಮಾ.ಕಾರ್ಯಪ್ಪ ವೃತ್ತದ ಬಳಿಯ ಉದ್ಯಾನವನಗಳನ್ನು ಪ್ರತಿಮೆ ಸ್ಥಾಪನೆಗೆ ಪರಿಗಣಿಸಬಹುದಾಗಿದೆ. ಆದಷ್ಟು ಶೀಘ್ರ‍್ರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡು ಪ್ರಸಕ್ತ ಸಾಲಿನ ಏ.14 ಡಾ.ಅಂಬೇಡ್ಕರ್ ಜಯಂತಿ ಒಳಗಾಗಿ ಪ್ರತಿಮೆ ನಿರ್ಮಾಣ ಮಾಡುವಂತೆ ಕೋರಿಕೊಂಡರು. ಮನವಿ ಸ್ವೀಕರಿಸಿದ ಪೌರಾಯುಕ್ತ ಹೆಚ್.ಆರ್.ರಮೇಶ್ ಅವರು, ನಗರಸಭೆಯ ಕಾವೇರಿ ಕಲಾಕ್ಷೇತ್ರದ ಉದ್ಯಾನವನವನ್ನು ಒಳಗೊಂಡoತೆ ಮೂರು ಹಂತದ ನಗರಸಭೆೆಯ ಕಟ್ಟಡ ನಿರ್ಮಾಣಕ್ಕೆ ಈಗಾಗಲೆ 16.90 ಕೋಟಿ ವೆಚ್ಚದ ವಿಸ್ತçತ ಕ್ರಿಯಾ ಯೋಜನೆಯನ್ನು ತಯಾರಿಸಿ ಸರಕಾರಕ್ಕೆ ಅನುಮೋದನೆಗಾಗಿ ಕಳುಹಿಸಲಾಗಿದೆ. ಈ ಹಿನ್ನೆಲೆ ಉದ್ಯಾನವನದಲ್ಲಿ ಬಾಬಾ ಸಾಹೇಬರ ಪ್ರತಿಮೆ ಸ್ಥಾಪನೆ ಕಷ್ಟ ಸಾಧ್ಯವಾಗಬಹುದು. ತಾವು ಸೂಚಿಸಿದ ಜಾಗಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಅಹಿಂದ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ ಕಳೆದ ಹಲವು ವರ್ಷಗಳಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಯಾಗಬೇಕೆನ್ನುವ ಬೇಡಿಕೆ ಇದೆ. ಇನ್ನಾದರು ನಗರದ ಯೋಗ್ಯ ಸ್ಥಳದಲ್ಲಿ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಮನವಿ ಸಲ್ಲಿಕೆಯ ಸಂದರ್ಭ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿ ಸದಸ್ಯರುಗಳಾದ ಮೋಹನ್ ಮೌರ್ಯ, ಗೌತಮ್ ಶಿವಪ್ಪ, ಆನಂದ್, ಈರಪ್ಪ, ಶೇಖರ್, ದೀಲೀಪ್, ವಿನಯ್ ಸಿ.ಪಿ.ಟಿ., ದೇವರಾಜು, ನಗರಸಭಾ ಸದಸ್ಯರುಗಳಾದ ಹೆಚ್.ಸಿ.ಸತೀಶ್, ಮನ್ಸೂರ್ ಮತ್ತಿತರರು ಹಾಜರಿದ್ದರು.