ಸುಂಟಿಕೊಪ್ಪ ಜ.4 NEWS DESK : ಪದವಿ ಪೂರ್ವ ಶಿಕ್ಷಣದ ಅವಧಿಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಹೇಳಿದರು. ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭ, ವಿದ್ಯಾರ್ಥಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಏಕಾಗ್ರತೆಯಿಂದ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಯಶಸ್ಸನ್ನುಗಳಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸಾಧನಾ ಶಿಖರವನ್ನು ಏರಬೇಕು. ಪೋಷಕರು ನಿಮ್ಮಗಳ ಮೇಲೆ ಇಟ್ಟಿರುವ ಭರವಸೆಯನ್ನು ಇಡೇರಿಸಬೇಕೆಂದು ಅವರು ಕರೆ ನೀಡದಿದರು. ಕಲ್ಲು ಶಿಲೆಯಾಗಿ ಶಿಲೆಯು ಮೂರ್ತಿಯಾದರೆ ಗರ್ಭಗುಡಿಯಲ್ಲಿ ಸ್ಥಾಪಿತವಾಗಿ ಪೂಜಿತವಾಗುತ್ತದೆ.ಅದೇ ಕಲ್ಲು ಮೆಟ್ಟಿಲಾದರೆ ತುಳಿತಕ್ಕೆ ಒಳಗಾಗಬೇಕಾಗುತ್ತದೆ.ಇದೇ ರೀತಿ ಸಾಧನೆ ಮಾಡಿದರೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಸಾಧನೆ ರಹಿತರಾದರೆ ಎಲ್ಲರ ತುಳಿತಕ್ಕೆ ಅಂದರೆ ಅವಹೇಳನಕ್ಕೆ ಒಳಗಾಗುತ್ತಾರೆ.ಆದ್ದರಿಂದ ವಿದ್ಯಾರ್ಥಿಗಳು ಸಾಧಕರಾಗಬೇಕೆಂದು ವಿ.ಜಿ.ಲೋಕೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಲತಾ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದವ ಸ್ಮರಿಸಿ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿ ಗಳು ಪಠ್ಯ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡುವಂತೆ ಅಧ್ಯಯನಕ್ಕೂ ಆದ್ಯತೆ ನೀಡಬೇಕೆಂದರು. ಪಿಯುಸಿ ವ್ಯಾಸಂಗವನ್ನು ಸಮರ್ಪಕವಾಗಿ ಮಾಡಿ ಕಾಲೇಜಿಗೆ ಉತ್ತಮ ಫಲಿತಾಂಶವನ್ನು ಲಭ್ಯವಾಗುವಂತೆ ಮಾಡಿ ಪೋಷಕರಿಗೂ, ತಾವು ಓದಿದ ಕಾಲೇಜಿಗೂ ಕೀರ್ತಿಯನ್ನು ತಂದುಕೊಡಬೇಕೆಂದರು. ಕಾರ್ಯಕ್ರಮ ದ ಅಂಗವಾಗಿ ನಡೆಸಿದ ಕ್ರೀಡಾ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು, ಬಹುಮಾನ ವಿತರಿಸಿದರು. ಕಳೆದ ಸಾಲಿನಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ವಿದ್ಯಾರ್ಥಿನಿ ಶಿಫಾ ಸ್ವಾಗತಿಸಿ, ಕಿಶೋರ್ ನಿರೂಪಿಸಿ, ಪಲ್ಲವಿ ವಂದಿಸಿದರು.