ಮಡಿಕೇರಿ NEWS DESK ಜ.6 : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮೂಲಕ ನೀಡುವ ರಾಜ್ಯ ಮಟ್ಟದ ಹೆಚ್.ಎನ್ ಪ್ರಶಸ್ತಿಗೆ ಭಾಜನರಾದ ‘ಶಕ್ತಿ’ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಹಾಗೂ ಮಹಿಳಾ ಸಾಧಕರಿಗೆ ನೀಡಲಾಗುವ ರಾಜ್ಯ ಮಟ್ಟದ ಚೈತನ್ಯಶ್ರೀ ಪ್ರಶಸ್ತಿಯನ್ನು ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ ಅವರಿಗೆ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಸಮೀಪದ ಬಾಗಲೂರು ವಿ ಜೆ ಇಂಟರ್ನ್ಯಾಷನಲ್ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಪರಿಷತ್ 4ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಶನಿವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಸ್ರೋ ಮಾಜಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವ ಮಾರ್ಗದರ್ಶಕರಾದ ಡಾ ಎ ಎಸ್ ಕಿರಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಿಲ್ಲೆ ಯ ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಎಚ್ಎನ್ ಪ್ರಶಸ್ತಿ ಪುರಸ್ಕೃತರಿಗೆ ಮತ್ತು 35 ಮಹಿಳಾ ಸಾಧಕರಿಗೆ ರಾಜ್ಯಮಟ್ಟದ ಚೈತನ್ಯ ಶ್ರೀ ಪ್ರಶಸ್ತಿ ನೀಡಲಾಯಿತು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾದ ರಂಗಕರ್ಮಿ ಚಲನಚಿತ್ರ ನಟಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಉಮಾಶ್ರೀ, ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್, ಗಣ್ಯರು ಹಾಗೂ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷೆ ವನಿತ ಚಂದ್ರಮೋಹನ್ ಮತ್ತು ಪ್ರಮುಖರು ಇದ್ದರು.
Breaking News
- *ಮಡಿಕೇರಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ 5ನೇ ಬಾರಿಗೆ ಮನು ಮುತ್ತಪ್ಪ ಆಯ್ಕೆ*
- *ಮಡಿಕೇರಿಯಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಣೆ : ವೇಮನ ತತ್ವ ಸಿದ್ದಾಂತಗಳು ಇಂದಿಗೂ ಪ್ರಸ್ತುತ : ಬಿ.ಎಸ್.ಲೋಕೇಶ್ ಸಾಗರ್*
- *ಕೊಡಗು ಜಿಲ್ಲಾಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ : ಸಮಾನತೆಯ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರ : ಮಾರುತಿ ದಾಸಣ್ಣವರ್*
- *ಸುಂಟಿಕೊಪ್ಪ : ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಹಳೆಯ ವಿದ್ಯಾರ್ಥಿಗಳ ಸಂಘ ಮುಂದಾಗಲಿ : ರಂಗದಾಮಯ್ಯ ಕರೆ*
- *ದರೋಡೆ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಬ್ಯಾಂಕ್ ಅಧಿಕಾರಿಗಳು, ಆಭರಣದಂಗಡಿಗಳ ಮಾಲೀಕರ ಸಭೆ ನಡೆಸಿದ ಕೊಡಗು ಎಸ್ಪಿ*
- *ಮಡಿಕೇರಿಯ ನಮಿತಾಗೆ ಪಿಹೆಚ್ಡಿ ಪದವಿ ಪ್ರದಾನ*
- *ಗಣರಾಜ್ಯೋತ್ಸವದ ವಿಶೇಷ ಅತಿಥಿ ಹೆಚ್.ಎ.ಹಂಸಗೆ ಸನ್ಮಾನ*
- *ಕೊಟ್ಟುಕತ್ತಿರ ಯಶೋಧ ಪ್ರಕಾಶ್ ರಚಿತ “ಮುಖಾಮುಖಿ” ಬಿಡುಗಡೆ : ಮಹಿಳಾ ಲೇಖಕಿಯರು ಸಮಾಜದ ಕಣ್ಣು ತೆರೆಸುತ್ತಿದ್ದಾರೆ : ವೀಣಾ ಅಚ್ಚಯ್ಯ ಶ್ಲಾಘನೆ*
- *ವಾಣಿವಿಲಾಸ ಜಲಾಶಯಕ್ಕೆ ಸಂಸದ ಯದುವೀರ್ ಒಡೆಯರ್ ಬಾಗಿನ ಅರ್ಪಣೆ*
- *ಕುಶಾಲನಗರದಲ್ಲಿ ಸಿದ್ದಗಂಗಾ ಶ್ರೀಗಳ ಸ್ಮರಣೆ : ಕಾಯಕಶ್ರಿ ಪ್ರಶಸ್ತಿ ಪ್ರದಾನ*