ಮಡಿಕೇರಿ ಜ.6 NEWS DESK : ಕೈಪಡ್ಕ ಶ್ರೀ ಕೊರಗಜ್ಜ ಸ್ವಾಮಿ ಸನ್ನಿಧಿಯಲ್ಲಿ ಫೆ.1 ರಂದು ಸ್ವಾಮಿ ಕೊರಗಜ್ಜ ಮತ್ತು ಗುಳಿಗ ದೈವದ ನೇಮೋತ್ಸವ ನಡೆಯಲಿದ್ದು, ಅದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ದೈವಸ್ಥಾನದ ಗೌರವಾಧ್ಯಕ್ಷ ಸುರೇಶ್ ಕದಿಕಡ್ಕ, ಅಧ್ಯಕ್ಷ ರವಿಚಂದ್ರ ಬಿಳಿಯಾರು, ಕಾರ್ಯದರ್ಶಿ ರಮೇಶ್, ಖಜಾಂಚಿ ಚಂಗಪ್ಪ ಕೈಪಡ್ಕ, ಶ್ರೀಧರ ದುಗ್ಗಳ, ರಾಜಗೋಪಾಲ, ಲೋಕ್ಯಾನಾಯ್ಕ್, ಪಿ.ಆರ್.ನಾಗೇಶ್, ಯೋಗೇಶ್ವರ ಕೈಪಡ್ಕ, ಪ್ರಶಾಂತ್ ಹಾಗೂ ಸದಸ್ಯರು, ಭಕ್ತಾಧಿಗಳು ಹಾಜರಿದ್ದರು.
ನೇಮೋತ್ಸವ :: ಫೆ.1 ರಂದು ಬೆಳಿಗ್ಗೆ 6 ಗಂಟೆಗೆ ಗಣಹೋಮ ಮತ್ತು ಸ್ಥಳಶುದ್ಧಿ, 7 ಗಂಟೆಗೆ ದೀಪಾರಾಧನೆ ನಡೆಯಲಿದ್ದು, ಸಂಜೆ 6 ಗಂಟೆಗೆ ಎಣ್ಣೆ ಕೊಡುವುದು, 7 ಗಂಟೆಗೆ ಗುಳಿಗ ದೈವದ ಕೋಲ, ರಾತ್ರಿ 8.30 ಗಂಟೆಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ರಾತ್ರಿ 8.45 ರಿಂದ ಶ್ರೀ ಕೊರಗಜ್ಜ ದೈವದ ನೇಮೋತ್ಸವ, ಕೊರಗಜ್ಜ ದೈವದ ಹರಕೆಯ ಕೋಲ, ನಂತರ ಪ್ರಸಾದ ವಿತರಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.