ವಿರಾಜಪೇಟೆ NEWS DESK ಜ.10 : ಕ್ಷುಲ್ಲಕ ಕಾರಣಕ್ಕೆ ಬಾವ ಮೈದುನರ ನಡುವೆ ನಡೆದ ಕಲಹ ಹತ್ಯೆಯಲ್ಲಿ ಕೊನೆಯಾದ ಘಟನೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಫಿ ತೋಟವೊಂದರ ಲೈನ್ ಮನೆಯಲ್ಲಿ ವಾಸವಿದ್ದ ಮಂಜು(22) ಎಂಬಾತನೇ ಹತ್ಯೆಯಾದ ವ್ಯಕ್ತಿಯಾಗಿದ್ದು, ಆರೋಪಿ ಅಭಿ(24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಫಿ ಕಾಯುವ ಕೆಲಸಕ್ಕೆ ರಾತ್ರಿಯ ವೇಳೆ ತೆರಳಿದ್ದ ಅಭಿ ಮತ್ತು ಮಂಜು ಅವರ ನಡುವೆ ಕಲಹ ನಡೆದಿದೆ. ಮೈದುನ ಮಂಜುವನ್ನು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.