
ಸೋಮವಾರಪೇಟೆ NEWS DESK ಜ.15 : ವೈಕುಂಠ ಏಕಾದಶಿಯ ಪ್ರಯುಕ್ತ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸೂರ್ಯಪಾದಜೀ ಸತ್ಸಂಗ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ದೇವರ ಸಂಕೀರ್ತನೆಯೊಂದಿಗೆ, ವೈಕುಂಠ ಏಕಾದಶಿಯ ಮಹತ್ವ, ನಾರಾಯಣ ನಾಮ ಸ್ಮರಣೆಯಿಂದ ಆಗುವ ಪ್ರಯೋಜನ, ಆಧ್ಯಾತ್ಮಿಕ ಮಾರ್ಗದಲ್ಲಿರುವ ಸುಖ ಶಾಂತಿಯ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಗಾಯಕರಾದ ರಂಜನಿ ರಘು ಮತ್ತು ಅಪೆಕ್ಸ್ ಸದಸ್ಯರಾದ ರಮಾನಂದ, ಕೊಡಗು ಜಿಲ್ಲೆ ಆರ್ಟ್ ಆಫ್ ಲಿವಿಂಗ್ ಶಿಕ್ಷಕ ಸಂಯೋಜ ಕಾರ್ಯಪ್ಪ, ಮಡಿಕೇರಿಯ ಕೆ.ಡಬ್ಲೂ. ಬೋಪಯ್ಯ, ಕೃಷ್ಣ ಬೋಪಯ್ಯ, ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ರಾಗಿಣಿ ಇದ್ದರು.








