ಮಡಿಕೇರಿ NEWS DESK ಜ.16 : ಉತ್ತರ್ ಖಂಡ್ ನ ಹರಿದ್ವಾರದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಕೊಡಗು ಜಿಲ್ಲೆಯ ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ಹೇಮಂತ್ ಪಿ.ಆಯ್ಕೆಯಾಗಿದ್ದಾರೆ ಎಂದು ಕೊಡಗು ಜಿಲ್ಲಾ ಕಬಡ್ಡಿ ಅಸೋಸಿಷನ್ ನ ಅಧ್ಯಕ್ಷ ಕಪಿಲ್ ಕುಮಾರ್ ತಿಳಿಸಿದ್ದಾರೆ. ಜ.29 ರಿಂದ ಫೆ.3 ರವರೆಗೆ ಪಂದ್ಯಾವಳಿ ನಡೆಯಲಿದ್ದು, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಷನ್ ನ ಬೆಂಗಳೂರಿನ ತರಬೇತಿ ಶಿಬಿರದಲ್ಲಿ ಹೇಮಂತ್ ತರಬೇತಿ ಪಡೆಯುತ್ತಿದ್ದಾರೆ. ಪ್ರತಾಪ್ ಹಾಗೂ ಗೀತಾ ದಂಪತಿಯ ಪುತ್ರ ಹೇಮಂತ್ ಅವರು ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿದ್ದಾರೆ.