ಹುದಿಕೇರಿ NEWS DESK ಜ.19 : ದಕ್ಷಿಣ ಕೊಡಗಿನ ಹುದಿಕೇರಿಯಲ್ಲಿ ಇದೇ ಏಪ್ರಿಲ್ -ಮೇ ತಿಂಗಳಿನಲ್ಲಿ ನಡೆಯುವ 23ನೇ ವರ್ಷದ ಕೊಡವ ಕ್ರಿಕೆಟ್ ಪಂದ್ಯಾವಳಿ ಚೆಕ್ಕೇರ ಕಪ್ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಹುದಿಕೇರಿ ಕೊಡವ ಸಮಾಜದಲ್ಲಿ ಅನಾವರಣಗೊಳಿಸಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಲಾಂಛನ ಬಿಡುಗಡೆಗೊಳಿಸಿದರು. ರಾಜ್ಯ ವಿದ್ಯುತ್ ಇಲಾಖೆಯ ಮುಖ್ಯ ಅಧಿಕಾರಿ ತೀತಿರ ರೋಷನ್ ಅಪ್ಪಚ್ಚು, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಚೆಕ್ಕೇರ ಕ್ರಿಕೆಟ್ ಕಪ್ ಉತ್ಸವದ ಅಧ್ಯಕ್ಷ ಚೆಕ್ಕೇರ ಚಂದ್ರಪ್ರಕಾಶ್, ತಕ್ಕ ಮುಖ್ಯಸ್ಥರಾದ ಚೆಕ್ಕೇರ ರಾಜೇಶ್, ಚೆಕ್ಕೇರ ಪಟ್ಟೆದಾರ ಕಟ್ಟಿ ಕುಟ್ಟಣಿ, ಕುಟುಂಬದ ಅಧ್ಯಕ್ಷ ಚೆಕ್ಕೇರ ಕಾಶಿ ಕಾಳಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.