ಮಡಿಕೇರಿ NEWS DESK ಜ.19 : ಪುಣ್ಯ ಭೂಮಿ ಅಯೋಧ್ಯೆಯ ಶ್ರೀರಾಮನ ಜನ್ಮ ಭೂಮಿಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣಗೊಂಡು 1 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಡಿಕೇರಿಯ ಶ್ರೀ ರಾಮ ಜನ್ಮ ಭೂಮಿ ಸೇವಾ ಸಮಿತಿ ವತಿಯಿಂದ ಜ.22 ರಂದು ಮಧ್ಯಾಹ್ನ ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಅನ್ನದಾನಕ್ಕೆ ಸಹಾಯ ನೀಡ ಬಯಸುವ ದಾನಿಗಳು ಈ ಮೊ.ಸಂಖ್ಯೆ ಗಳನ್ನು ಸಂಪರ್ಕಿಸಲು ಕೋರಿದೆ. ನವೀನ್ : 9964791158, ಶೇಖರ್ 9945717019, ರಘು 9844438313, ಸದಾಶಿವ ರೈ: 9483233664, ಪ್ರಸಾದ್ ಸಂಪಿಗೆಕಟ್ಟೆ:9731469871.